

ವಿಜಯವಾಣಿ ಸುದ್ದಿಜಾಲ ಗದಗ
ದೇಶದಲ್ಲಿ ತಂತ್ರಜ್ಞಾನ ಬೆಳೆದಂತೆ ವ್ಯಾಪಾರ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ತಂತ್ರಜ್ಞಾನ ಎಂದು ಪ್ರಾರಂಭವಾಯಿತು ಅಂದಿನಿಂದ ಹಂತ ಹಂತವಾಗಿ ಬದಲಾವಣೆಯತ್ತ ದೇಶ ಸಾಗಿದೆ ಎಂದು ಹುಬ್ಬಳ್ಳಿ ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ) ಉಪ ಆಯುಕ್ತ ಬಾಳಪ್ಪ ಸಂಪಗಾವ ಹೇಳಿದರು.
ನಗರದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಜಿಲ್ಲಾ ತೆರಿಗೆ ಸಲಹೆಗಾರರ ಸಂಘ, ಚಾಪ್ಟರ್ ಆಪ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಶ್ರಯದಲ್ಲಿ ಲಿಂ.ಭೀಮನಗೌಡ ದ್ಯಾಮನಗೌಡ ದಾನಪ್ಪಗೌಡ್ರ, ಲಿಂ.ಚಂದ್ರಶೇಖರಪ್ಪ ಮುನವಳ್ಳಿ, ಲಿಂ. ಈಶ್ವರಪ್ಪ ಮಲ್ಲಿಕಾರ್ಜುನ ಬೇಲೇರಿ ಹಾಗೂ ದಿ. ಇಂದುಮತಿ ಲಕ್ಷ್ಮಣರಾವ ಪೊತ್ನೀಸ್ ಸ್ಮಾರಕ ದತ್ತಿ ಉಪನ್ಯಾಸ ನಿಮಿತ್ತ ಬುಧವಾರ ಆಯೋಜಿಸಿದ್ದ ಇ-ಇನ್‍ವೈಸಿಂಗ್ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಇನ್‍ವೈಸ್ ಇಲ್ಲದೇ ವ್ಯಾಪಾರ ಇಲ್ಲ. ಇ-ಇನ್‍ವೈಸಿಂಗ್ ಅಂದರೆ ಇಲೆಕ್ಟ್ರಾನಿಕ್ಸ್ ಮಿಡಿಯಾ ಎಂಬ ಅರ್ಥ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ವ್ಯಾಪಾರ ಮಾಡುವುದಕ್ಕೆ ಕರ್ನಾಟಕವು ಮುಂಚೂಣಿಯಲ್ಲಿದೆ. 2010ರಿಂದ `ಈ-ಸುಗಮಾ` ಬಂದಾಗಿನಿಂದ ಸಾಕಷ್ಟು ಸುಧಾರಣೆಗಳು ಆಗಿವೆ. ವ್ಯಾಪಾರಸ್ಥರು ಖರೀದಿ ಮತ್ತು ವಿಲೇವಾರಿ ಮಾಡುವ ಸಂದರ್ಭದಲ್ಲಿ ಈ ಹಿಂದೆ ಇನ್‍ವೈಸ್ ಮಾಡುವ ಪದ್ಧತಿಯಂತೆ ಈಗ ಇ-ಇನ್‍ವೈಸಿಂಗ್ ಮಾಡಬೇಕು. ಒಕ್ಕುಲುತನದಲ್ಲಿ ಇತ್ತೀಚೆಗೆ ತಂತ್ರಜ್ಞಾನ ಬಳಕೆ ಮಾಡುತ್ತಾರೆ. ಅದೇ ರೀತಿ ವ್ಯಾಪಾರದಲ್ಲಿ ಕೂಡಾ ತಂತ್ರಜ್ಞಾನದ ಮುಖಾಂತರ ವ್ಯಾಪಾರ ಮಾಡುವುದು ಇದರಿಂದ ಇಲಾಖೆಗೆ ಕೂಡಾ ಮಾಹಿತಿ ಹೋಗುತ್ತದೆ. ಇದರಿಂದ ವ್ಯಾಪಾರಸ್ಥರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು.
ಹುಬ್ಬಳ್ಳಿ ವಾಣಿಜ್ಯ ತೆರಿಗೆ ಇಲಾಖೆಯು (ಜಾರಿ) ಸಹಾಯಕ ಆಯುಕ್ತ ಸಂಜೀವ ಜೋಶಿ, ಇನ್‍ವೈಸ್ ಇಲ್ಲದೇ ವ್ಯಾಪಾರವಿಲ್ಲ, ಅ. 1ರಿಂದ 10 ಕೋಟಿ ಮೇಲ್ಪಟ್ಟು ವ್ಯವಹಾರ ಮಾಡುವವರು ಇ-ಇನ್‍ವೈಸಿಂಗ್ ಮಾಡಬೇಕು. ಇನ್‍ಫುಟ್ ಪಡೆಯಬೇಕಾದಲ್ಲಿ ಮತ್ತು 50 ಸಾವಿರ ಮೌಲ್ಯದ ವಸ್ತುಗಳ ರವಾನೆಗೆ ಇ- ಇನ್‍ವೈಸ್ ಮಾಡಬೇಕಾಗುತ್ತದೆ. ಅದು ಸಾಗಾಣಿಕೆ ಪೂರ್ವದಲ್ಲಿ ಕೊಡಬೇಕಾಗುತ್ತದೆ. ಸಾಗಾಣಿಕೆ ವಾಹನದಲ್ಲಿ 1000 ವಸ್ತುಗಳು ಇದ್ದರೂ ಕೂಡಾ ಟ್ರಾನ್ಸ್‍ಪೆÇೀರ್ಟ್‍ದವರು ಇ- ಇನ್ ವೈಸಿಂಗ್ ಮಾಡಬೇಕೆಂದು ಎಂದರು.
ಗದಗ ವಾಣಿಜ್ಯ ತೆರಿಗೆ ಇಲಾಖೆಯು (ಜಾರಿ) ವಿಭಾಗದ ಸಹಾಯಕ ಆಯುಕ್ತ ಶರಣೇಶ ಹಂದಿಗನೂರ, 10 ಕೋಟಿ ರೂ. ಮೇಲ್ಪಟ್ಟರೆ ಇ- ಇನ್‍ವೈಸಿಂಗ್ ಮಾಡಬೇಕು 30 ದಿನಗಳ ಕಾಲಾವಕಾಶ ಇರುತ್ತದೆ. ಟ್ಯಾಕ್ಸ್ ಗೆ ಒಳಪಡುವ ವಸ್ತುಗಳಿಗೆ ಮಾತ್ರ ಇ- ಇನ್‍ವೈಸಿಂಗ್ ಮಾಡಬೇಕಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ರಾಮನಗೌಡ ದಾನಪ್ಪಗೌಡ್ರ ಮಾತನಾಡಿದರು.
ವಿಚಾರ ಸಂಕಿರಣದಲ್ಲಿ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಎಸ್.ಆರ್. ಪಾಟೀಲ, ಚಾಪ್ಟರ ಆಪ್ ಚಾರ್ಟರ್ಡ್ ಅಕೌಂಟೆಂಟ್ಸ್ ಅಧ್ಯಕ್ಷ ಆರ್. ಆರ್. ಜೋಶಿ, ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಉಮೇಶ ಹುಬ್ಬಳ್ಳಿ, ಮದುಸೂಧನ ಪುಣೇಕರ, ಈಶ್ವರಪ್ಪ ಮುನವಳ್ಳಿ, ತಾತನಗೌಡ ಪಾಟೀಲ, ಪ್ರಕಾಶ ಉಗಲಾಟ, ರಾಘವೇಂದ್ರ ಕಾಲವಾಡ ಮತ್ತಿತರರು ಇದ್ದರು.
ಸಂಸ್ಥೆಯ ಉಪ ಸಮಿತಿ ಚೇರ್ಮನ್ ವಿ.ಎಸ್.ಮಾಡಲದಿನ್ನಿ ಪ್ರಾಸ್ತಾವಿಕ ಮಾತನಾಡಿದರು. ಸಹ ಗೌರವ ಕಾರ್ಯದರ್ಶಿ ಶರಣಬಸಪ್ಪ ಗುಡಿಮನಿ ಪರಿಚಯಿಸಿದರು. ಗೌರವ ಕಾರ್ಯದರ್ಶಿ ಹರೀಶಕುಮಾರ ಎಸ್. ಶಹಾ ವಂದಿಸಿದರು.