

ತುಮಕೂರು: ಪದವೀಧರರು ದೇಶದ ಅಭಿವೃದ್ಧಿಗೆ ಏನು ಕೊಡುಗೆ ನೀಡಬಹುದು ಎಂಬುದನ್ನು ಚಿಂತಿಸಬೇಕು, ಪ್ರಧಾನಮಂತ್ರಿ ಅವರು ಹೇಳಿರುವಂತೆ ಆತ್ಮನಿರ್ಭರ ಭಾರತ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಭಾರತ್ ಫೋರ್ಜ್ ಲಿ., ಛೇರ್ಮನ್ ಬಾಬಾ ಸಾಹೇಬ್ ನೀಲಕಂಠ ಕಲ್ಯಾಣಿ ಹೇಳಿದರು.
ನಗರದ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ 12ನೇ ಪದವಿ ಪ್ರದಾನ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ತಾಂತ್ರಿಕತೆಯಲ್ಲಿ ಮತ್ತಷ್ಟು ಕ್ರಾಂತಿ ಮಾಡಲು ಯುವ ಪೀಳಿಗೆ ಸಿದ್ಧರಾಗಬೇಕಿದೆ ಎಂದು ಸಲಹೆ ನೀಡಿದರು.
ಭಾರತದ ಉದ್ಯಮ ೇತ್ರ ಯಶಸ್ವಿಯಾಗಿ ಮುನ್ನಡೆಯುತ್ತಿದೆ, ಬಾಹ್ಯಾಕಾಶ, ಮಾಹಿತಿ, ತಂತ್ರಾನ ೇತ್ರದಲ್ಲಿಯೂ ದೇಶ ಪ್ರಗತಿ ಕಂಡಿದ್ದು ಯುವ ಜನರು ಹೆಚ್ಚು ಅಧ್ಯಯನದ ಜತೆ ಹೊಸ ಸಂಶೋಧನೆಯಲ್ಲಿ ತೊಡಗಬೇಕು ಎಂದರು.
ದೇಶದ ಪ್ರತಿಷ್ಠಿತ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಹೆಮ್ಮೆಯಿಂದ ಜಗತ್ತಿನಲ್ಲಿ ಕೆಲಸ ಮಾಡಬಹುದು, ಸಿದ್ಧಗಂಗಾ ವಿದ್ಯಾಸಂಸ್ಥೆ ಗುಣಮಟ್ಟದ ಶಿಣಕ್ಕೆ ಹೆಸರಾಗಿದ್ದು, ಇಂತಹ ಸಂಸ್ಥೆಯಲ್ಲಿ ಪದವೀಧರರಾದ ನೀವು ದೇಶಕ್ಕೆ ಕೊಡುಗೆ ಸಲ್ಲಿಸಬೇಕು ಎಂದರು.
ಸಾವಿರಾರು ಮೈಲಿಯ ಜೀವನದ ಪಯಣದಲ್ಲಿ ಪದವಿ ಸ್ವೀಕರಿಸಿದ್ದು ಮೊದಲ ಮೆಟ್ಟಿಲು, ಭವಿಷ್ಯದ ಸವಾಲುಗಳಿಗೆ ಸಿದ್ಧರಾಗಿರಬೇಕು, ನಿರಂತರ ಕಲಿಕೆಯ ಮೂಲಕ ಉದ್ಯೋಗ ಹಾಗೂ ಜೀವನ ಕೌಶಲ ಹೆಚ್ಚಿಸಿಕೊಳ್ಳಬೇಕು ಎಂದರು.
ದೇಶ ಕಳೆದ ಏಳು ವರ್ಷದಲ್ಲಿ ಸುಸ್ಥಿರ ಸರ್ಕಾರ ಕಂಡಿದ್ದು ಸಾಕಷ್ಟು ಅಭಿವೃದ್ಧಿ ಅವಕಾಶ ಸೃಷ್ಟಿಯಾಗಿವೆ, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ದೇಶದ ಪ್ರತಿಷ್ಠೆ ಮತ್ತಷ್ಟು ಹೆಚ್ಚಾಗಿದೆ. ಶೇ.30 ಕೌಶಲವಂತರ ಪೈಕಿ ಭಾರತೀಯರೇ ಇದ್ದಾರೆ, ಭಾರತ ವಿಶ್ವದಲ್ಲಿ ಮುಂದಿನ ತಂತ್ರಾನ ೇತ್ರವನ್ನು ಆಳಲಿದೆ ಎಂದರು.
ಭವಿಷ್ಯದಲ್ಲಿ ಟೆಕ್ನಾಲಜಿ ಕ್ರಾಂತಿಯಾಗಲಿದ್ದು, ಈ ಮಹತ್ಕಾರ್ಯದಲ್ಲಿ ಭಾರತೀಯ ಯುವಕರೇ ಕಾರಣರಾಗಲಿದ್ದಾರೆ, ಪ್ರಸ್ತುತ ನಮ್ಮ ಭಾರತವೇ ಇಕೋ ಸಿಸ್ಟಮ್ ಅಳವಡಿಸಿಕೊಳ್ಳುತ್ತಿರುವ ದೇಶ ಎನಿಸಿದೆ, ಭಾರತದ ಯುವಕರು ದೇಶವನ್ನು ವಿಶ್ವ ಮಟ್ಟದಲ್ಲಿ ಪ್ರತಿನಿಧಿಸಿ ಕೀರ್ತಿ ತರಬೇಕು ಎಂದರು.
ಎಸ್ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ಸಿಇಒ ಡಾ.ಶಿವಕುಮಾರಯ್ಯ, ಪ್ರಾಚಾರ್ಯ ಡಾ.ಎಸ್.ವಿ.ದಿನೇಶ್ ಇದ್ದರು.
ಭಾರತದ ಕೀರ್ತಿ ಹೆಚ್ಚಿಸಬೇಕು: ಕರೊನಾ ಸಂಕಷ್ಟವನ್ನು ಭಾರತ ನಿಭಾಯಿಸಿದ ರೀತಿ ವಿಶ್ವವನ್ನು ಬೆರಗುಗೊಳಿಸಿದೆ, 140ಕೋಟಿ ಜನಸಂಖ್ಯೆಯ ದೇಶದಲ್ಲಿ ಕರೊನಾ ಸೋಂಕು ಸಂದರ್ಭದಲ್ಲಿ ಹೆಚ್ಚು ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಿದೆ ಎಂದು ಬಾಬಾ ಸಾಹೇಬ್ ನೀಲಕಂಠ ಕಲ್ಯಾಣಿ ಹೇಳಿದರು. ಜಗತ್ತು ಭಾರತವನ್ನು ಹೆಚ್ಚು ಗೌರವಿಸುವ ತಲೆಮಾರಿನ ಇಂದಿನ ಯುವ ವಿದ್ಯಾವಂತರು ವಿವಿಧ ದೇಶದ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ, ಇದು ತಂತ್ರಾನದಿಂದ ಸಾಧ್ಯವಾಗಿದೆ, ದೇಶದ ಬೆಳವಣಿಗೆಗೆ ನೀಡಬಹುದಾದ ಎಲ್ಲ ಅವಕಾಶ ಬಳಸಿಕೊಳ್ಳಬೇಕು, ಜಾಗತ್ತಿಕ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಬೇಕು ಎಂದರು.
ವಿದ್ಯಾರ್ಥಿಗಳು ಹೆಚ್ಚು ಆಸಕ್ತರಾಗಿ: ಭಾರತದಲ್ಲಿ 35 ವರ್ಷದೊಳಗಿನ ಯುವ ಜನತೆ ಶೇ.65 ಇದೆ. ವ್ಯಾಸಂಗ ಮುಗಿಸಿದ ನಂತರ ಉದ್ಯೋಗಕ್ಕೆ ಸೇರಿದಾಗ ಬದುಕಿನಲ್ಲಿ ಕೆಲವು ಅಂಶಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮ ಓದಿಗೆ ಸಹಕಾರಿಗಳಾದ ತಂದೆ ತಾಯಿ, ಪಾಲಕರನ್ನು ಎಂದಿಗೂ ಮರೆಯಬಾರದು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ತಿಳಿಸಿದರು.
ಜ್ಞಾನ ಸಂಪಾದನೆಗೆ ಮಿಗಿಲಾದ ಅಂಶ ಮತ್ತೊಂದಿಲ್ಲ, ಯಾರು ಹೆಚ್ಚು ಜ್ಞಾನ ಸಂಪಾದನೆ ಮಾಡುತ್ತಾರೋ ಅಂತಹವರು ಎಲ್ಲ ಸಮಸ್ಯೆಗಳನ್ನೂ ಪರಿಹರಿಸಿಕೊಳ್ಳುತ್ತಾರೆ. ಅಂತಹ ಜ್ಞಾನಮಾರ್ಗದತ್ತ ಯುವ ಜನತೆ ಮುಂದಾಗಬೇಕು ಎಂದರು. ಅನ್ವೇಷಣೆ, ಆವಿಷ್ಕಾರ ಮತ್ತು ಉದ್ಯಮಶೀಲತೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಾಗ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಆಸಕ್ತರಾಗಬೇಕು ಎಂದು ಸಲಹೆ ನೀಡಿದರು.
1096 ವಿದ್ಯಾರ್ಥಿಗಳಿಗೆ ಪದವಿ: ಎಂಬಿಎ 93 ಅಭ್ಯರ್ಥಿಗಳು, ಎಂಸಿಎ 58 ಅಭ್ಯರ್ಥಿಗಳು, ಎಂ.ಟೆಕ್., 50 ಅಭ್ಯರ್ಥಿಗಳು ಮತ್ತು ಬಿ.ಇ., 833 ಅಭ್ಯರ್ಥಿಗಳು ಹಾಗೂ ಬಿ ಆರ್ಕಿಟೆಕ್ಟ್ 62 ಒಟ್ಟು 1096 ಅಭ್ಯರ್ಥಿಗಳು ಈ ಬಾರಿ ಪದವಿ ಪಡೆದರು. ಇನ್ಫಮೇರ್ಷನ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ರಾಚುರ್ ಅಕ್ಷಿತ್ ಎಸ್ಐಟಿ ಟಾಪರ್ ಎನ್ನಿಸಿದ್ದು ಡಾ.ಶಿವಕುಮಾರ ಸ್ವಾಮೀಜಿ ಚಿನ್ನದ ಪದಕ ಸೇರಿ ಒಟ್ಟು 3 ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಜಿ.ಗಾಯತ್ರಿ(ಸಿವಿಲ್), ಜೆ.ಎಸ್.ಪುನೀತ್(ಮೆಕ್ಯಾನಿಕಲ್), ಸಚಿನ್ ಕೃಷ್ಣ ಮೊಗೆರ್(ಕೆಮಿಕಲ್ ಇಂಜಿನಿಯರಿಂಗ್) ತಲಾ 6 ಚಿನ್ನದ ಪದಕ ಹಾಗೂ ಆರ್.ಕಾವ್ಯಾ, ಸೃತಿಮ್ಯ ಸಂತ್ರ(ಇ ಅಂಡ್ ಸಿ) ತಲಾ 4 ಚಿನ್ನದ ಪದಕ ಸೇರಿ ವಿವಿಧ ವಿಭಾಗಗಳಲ್ಲಿ ರ್ಯಾಂಕ್ಗಳಿಸಿದ್ದ 33 ವಿದ್ಯಾರ್ಥಿಗಳು ಚಿನ್ನದ ಪದಕ ಪ್ರದಾನ ಮಾಡಲಾಯಿತು.