ತಾಂಡಾಗಳ ಜ್ವಲಂತ ಸಮಸ್ಯೆ ಪರಿಹಾರಕ್ಕಾಗಿ ಹೋರಾಟ

Pressmeet
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಒಟ್ಟು 154 ಲಂಬಾಣಿ ತಾಂಡಾಗಳಿದ್ದು, ಜ್ವಲಂತ ಸಮಸ್ಯೆಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಕಾರ್ಯ ಬಂಜಾರ ಸೇವಾ ಸಂಘ ಮಾಡಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಗಿರೀಶ್ ನಾಯ್ಕ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಹಲವು ತಾಂಡಾಗಳಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಶುದ್ಧ ಕುಡಿಯುವ ನೀರು, ಸಮರ್ಪಕ ರಸ್ತೆ, ವಸತಿ, ಗ್ರಂಥಾಲಯ ಸೌಕರ್ಯ ಇಲ್ಲ. ಅಪೌಷ್ಟಿಕತೆ ಕೊರತೆಯೂ ಕಾಡುತ್ತಿದೆ ಎಂದರು.

ಸಂಘದ ನಡೆ ತಾಂಡಾಗಳ ಕಡೆ ಎಂಬ ಘೋಷವಾಕ್ಯದಡಿ ಮುಂದಿನ ದಿನಗಳಲ್ಲಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಪ್ರತಿ ತಾಂಡಾಗಳಿಗೆ ಭೇಟಿ ನೀಡುವುದರ ಜೊತೆಗೆ ಅಲ್ಲಿನ ಸಮಸ್ಯೆಗಳನ್ನು ಹಂತ-ಹಂತವಾಗಿ ಪರಿಹರಿಸಲು ಹೋರಾಟ ನಡೆಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಜಿಪಂ ಮಾಜಿ ಸದಸ್ಯ ರಾಜನಾಯ್ಕ, ಮುಖಂಡರಾದ ಪತಿಯಪ್ಪ, ವೆಂಕಾನಾಯ್ಕ, ನಿವೃತ್ತ ಶಿಕ್ಷಕರಾದ ಜಯನಾಯ್ಕ, ಮಂಜನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net