

ಮಾಗಡಿ : ‘ತಹಸೀಲ್ದಾರ್ ಇದ್ದಾನೋ, ಸತ್ತುಹೋಗಿದ್ದಾನೋ, ನೀವಿದ್ದೂ ಬರದಿದ್ದರೆ ತಾಲೂಕು ಆಡಳಿತ, ತಹಸೀಲ್ದಾರ್ ಸತ್ತಂಗಲ್ಲವೇ...?
ಇದು, ತಾಲೂಕಿನ ತೊರೆಚನ್ನಹಳ್ಳಿಯ ಸಂಪರ್ಕ ಸೇತುವೆ ಕುಸಿದರೂ ಸ್ಥಳಕ್ಕೆ ಭೇಟಿ ನೀಡದ ತಹಸೀಲ್ದಾರ್ ಶರತ್ ಕುಮಾರ್ ಅವರನ್ನು ಶಾಸಕ ಶ್ರೀನಿವಾಸ್ ತರಾಟೆಗೆ ತೆಗೆದುಕೊಂಡ ಪರಿ.
ತಾಲೂಕಿನ ಬೆಳಗುಂಬ ಗ್ರಾಪಂ ವ್ಯಾಪ್ತಿಯ ತೊರೆಚನ್ನಹಳ್ಳಿ ಬಳಿ ಸೋಮವಾರ ಮುಂಜಾನೆ ಸೇತುವೆ ಕುಸಿದು ಗ್ರಾಮಸ್ಥರಿಗೆ ತೊಂದರೆಯಾಗಿದೆ. ಈ ಸಂಬಂಧ ಮಂಗಳವಾರ ಶ್ರೀನಿವಾಸ್ ಭೇಟಿ ನೀಡಿ, ಸೇತುವೆಯನ್ನು ವೀಕ್ಷಿಸಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಈ ವೇಳೆಯೂ ಸ್ಥಳಕ್ಕೆ ಬಾರದ ತಹಸೀಲ್ದಾರ್ ಅವರನ್ನು ಕರೆಸಿ ತರಾಟೆಗೆ ತೆಗೆದುಕೊಂಡರು.
ಸೇತುವೆ ಕುಸಿದು ಜನಸಂಪರ್ಕ ಕಳೆದುಕೊಂಡರೂ ಅಧಿಕಾರಿಗಳು ಭೇಟಿ ನೀಡದಿರುವುದು ಅಪರಾಧ. ಘಟನೆ ನಡೆದ ಕೂಡಲೇ ಜನರ ನೆರವಿಗೆ ಧಾವಿಸಬೇಕು. ನೀವು ಬರದಿದ್ದರೇ ತಹಸೀಲ್ದಾರ್ ಇದ್ದಾನೋ, ಸತ್ತುಹೋಗಿದ್ದಾನೋ ಎಂದು ಜನರು ತಿಳಿದುಕೊಳ್ಳುವಂತಾದರೆ ಏನರ್ಥ ಎಂದು ಪ್ರಶ್ನಿಸಿದರು.
ಮಂಚನಬೆಲೆ ಬಳಿ ಯಾವ ಸಮಸ್ಯೆ ಇಲ್ಲ, ಪ್ರತಿದಿನ 15 ಬಿಎಂಟಿಸಿ ಬಸ್ ತಿರುಗಾಡಲಿವೆ. ಇಲ್ಲಿ ಸಮಸ್ಯೆ ಇದೆ, ಇಲ್ಲಿಗೆ ಬಂದು ಸಮಸ್ಯೆ ಆಲಿಸದಿದ್ದರೆ ಹೇಗೆ ಎಂದು ಶಾಸಕರು ತಹಸೀಲ್ದಾರ್ ಬೆವರಿಳಿಸಿದರು.
ಸಂಕಷ್ಟದಲ್ಲಿರುವ ನಾಗರಿಕರ ಬಳಿ ಬಂದು ತಾಲೂಕು ಆಡಳಿತ ನಿಮ್ಮಪರವಾಗಿದೆ ಎಂದು ಧೈರ್ಯತುಂಬಿ. ಸ್ಥಳ ವೀಕ್ಷಿಸದೆ ಸಭೆ ನಡೆಸಿದರೆ ಹೇಗೆ ಎಂದು ಪ್ರಶ್ನಿಸಿದರು. ತಹಸೀಲ್ದಾರ್ ಕೆಲಸವನ್ನು ನಾನು, ಜನರು ಸರ್ಟಿೈ ಮಾಡಬೇಕು, ಸೆಲ್ಫ್ ಡಿಕ್ಲರೇಷನ್ ಮಾಡಿಕೊಳ್ಳುವುದು ಸರಿಯಲ್ಲ. ನೆಲಮಂಗಲಕ್ಕೆ ಬಾ, ಅಲ್ಲಿನ ತಹಸೀಲ್ದಾರ್ ಹೇಗೆ ಕೆಲಸಮಾಡುತ್ತಿದ್ದಾರೆ ಎಂದು ತೋರಿಸುತ್ತೇನೆ. ನೆಲಮಂಗಲ ತಹಸೀಲ್ದಾರ್ ಸ್ಮಶಾನ, ನಿವೇಶನ, ಕ್ರೀಡಾಂಗಣಕ್ಕೆ ನಿವೇಶನ ಗುರುತಿಸಿದ್ದಾರೆ. ನೀನು ಸೋಲೂರು ಹೋಬಳಿಯಲ್ಲಿ ಎಷ್ಟು ಗುರುತಿಸಿದ್ದೀಯಾ ದಾಖಲೆ ನೀಡು, ಕೆಲಸ ಮಾಡಿದ್ದರೆ ದಾಖಲೆ ತರಬೇಕಿತ್ತು. ಏನೂ ಮಾಡದೆ ಡಿೈನ್ ಮಾಡಿಕೊಳ್ಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಆರ್‌ಐಗೆ ಪೊನ್ ಮಾಡಿದರೆ ಕರೆ ಎತ್ತುವುದಿಲ್ಲ, ಮಲ್ಲೂರು ವಿಎಯನ್ನು ತಲೆಮೇಲೆ ಕೂರಿಸಿಕೊಂಡಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.
ಖಾಸಗಿ ಕಂಪನಿಯವರು ಸರ್ಕಾರಿ ಜಾಗ ಒತ್ತುವರಿ ಮಾಡಿದ್ದಾರೆ. ಏಕೆ ಸ್ಥಳ ಪರಿಶೀಲಿಸಿಲ್ಲ? ಇದನ್ನೆಲ್ಲ ಸೇರಿಸಿ ನಿನ್ನ ವಿರುದ್ಧ ರೈಟಿಂಗ್‌ನಲ್ಲಿ ಸಿಎಂ, ರೆವಿನ್ಯೂ ಕಾರ್ಯದರ್ಶಿಗಳಿಗೆ ಪತ್ರನೀಡುತ್ತೇನೆ ಎಂದು ಎಚ್ಚರಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಜಿಪಂ ಮಾಜಿ ಸದಸ್ಯ ರಂಗಸ್ವಾಮಿ, ಶರ್ಮ, ಹನುಮಂತರಾಜು, ಗಂಗರಂಗಯ್ಯ ಇದ್ದರು.