ತಹಸೀಲ್ದಾರ್ ಕಚೇರಿ ಮುಂಭಾಗ ಡಾ.ಅಂಬೇಡ್ಕರ್ ಪ್ರತಿಮೆ ಕಾಮಗಾರಿ

ತಹಸೀಲ್ದಾರ್ ಕಚೇರಿ ಮುಂಭಾಗ ಡಾ.ಅಂಬೇಡ್ಕರ್ ಪ್ರತಿಮೆ ಕಾಮಗಾರಿ
Published on

ಬೇಲೂರು : ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆ ಮಾದರಿಯಲ್ಲೆ ಬೇಲೂರು (ತಹಸೀಲ್ದಾರ್)ತಾಲೂಕು ಆಡಳಿತ ಸೌಧದ ಮುಂದೆ ಪ್ರತಿಮೆ ನಿಲ್ಲಿಸಬೇಕೆಂಬ ಉದ್ದೇಶದಿಂದ ಕೆಲಸ ಮಾಡಿಸಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.


ಬೇಲೂರು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸಂಬಂಧ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಡಿದ ಅವರು, ಬುದ್ಧ, ಬಸವ, ಅಂಬೇಡ್ಕರ್‌ರವರು ಪ್ರಪಂಚದ ಮಹಾನ್ ದಾರ್ಶನಿಕರು. ಅಲ್ಲದೆ ಬೆಂಗಳೂರು ವಿಧಾನಸೌಧಕ್ಕೆ ಹೋದಾಗಲೆಲ್ಲ ಡಾ.ಅಂಬೇಡ್ಕರ್‌ರವರ ಪ್ರತಿಮೆಯನ್ನು ನೋಡುತ್ತೇವೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್‌ರವರಿಗೆ ಗೌರವ ಸಮರ್ಪಿಸುವ ನಿಟ್ಟಿನಲ್ಲಿ ಅದೇ ಮಾದರಿಯಲ್ಲಿ ಬೇಲೂರಿನ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಕಂಚಿನ ಪ್ರತಿಮೆ ನಿಲ್ಲಿಸುವ ನಿಟ್ಟಿನಲ್ಲಿ ಶಾಸಕರ 5 ಲಕ್ಷ ರೂ, ಅನುದಾನದಲ್ಲಿ ಪ್ರತಿಮೆಯ ಪೀಠ ನಿರ್ಮಿಸಲಾಗುತ್ತಿದೆ. ನಂತರದಲ್ಲಿ ನನ್ನ ಮಗ ಹರ್ಷನ ಹೆಸರಿನಲ್ಲಿ 12 ಅಡಿ ಎತ್ತರದ ಡಾ.ಅಂಬೇಡ್ಕರ್ ಕಂಚಿನ ಪ್ರತಿಮೆ ಮಾಡಿಸುತಿದ್ದು, ಪ್ರತಿಮೆಯನ್ನು ಜನವರಿ 26 ರಂದು ಲೋಕಾರ್ಪಣೆ ಮಾಡುವ ಉದ್ದೇಶ ಹೊಂದಿದ್ದೇವೆ. ಅದಕ್ಕಾಗಿ ಈಗ ಪೀಠ ನಿರ್ಮಿಸಲಾಗುತ್ತಿದೆ ಎಂದರು.


ತಹಸೀಲ್ದಾರ್ ರಮೇಶ್, ತಹಸೀಲ್ದಾರ್ ಗ್ರೇಡ್-2 ಅಶೋಕ್ ಕುಮಾರ್, ದಲಿತ ಮುಖಂಡ ಈಶ್ವರ್ ಪ್ರಸಾದ್, ವೀರಶೈವ ಮಹಾಸಭ ಅಧ್ಯಕ್ಷ ರವಿಕುಮಾರ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net