ತವರು ನೆಲದಲ್ಲಿ ವೀರ ಯೋಧನಿಗೆ ಅದ್ದೂರಿ ಸ್ವಾಗತ

IMG20230803160128 copy
Published on

ಯಾದಗಿರಿ: ಎರದು ದಶಕಕ್ಕೂ ಹೆಚ್ಚು ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿ ಗುರುವಾರ ನಗರಕ್ಕೆ ಆಗಮಿಸಿ ತಾಲೂಕಿನ ಚಾಲನಾಳ ಗ್ರಾಮದ ವೀರಯೋಧ ಅಮೋಘಸಿದ್ದಪ್ಪ ಅವರಿಗೆ ಗುರುವಾರ ನಾಗರಿಕರಿಂದ ಅದ್ದೂರಿ ಸ್ವಾಗತ ಕೋರಲಾಯಿತು.
ಅಮೋಘ ಸಿದ್ಧಪ್ಪ ಭಾರತೀಯ ಸೇನೆ ಬಿಎಸ್ಎಫ್ನಲ್ಲಿ ಸತತ 21 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಗರಕ್ಕೆ ಬರುತ್ತಿದ್ದಂತೆ ಇಲ್ಲಿನ ಸಿಬಿ ಕಮಾನ್ ಮೂಲಕ ಬಸವೇಶ್ವರ ವೃತ್ತದವರೆಗೆ ತೆರದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಕನ್ನಡ ಪರ ಸಂಘಟಕರು, ನಿವಾಸಿಗಳು, ನಿವೃತ್ತ ಶಿಕ್ಷಕರು, ಯುವಕರು ಹೂಮಾಲೆ ಹಾಕಿ ರಾಷ್ಟ್ರಧ್ವಜಗಳನ್ನು ಹಿಡಿದು ಸಂಭ್ರಮಿಸಿದರು.
ಸಗರ ಗ್ರಾಮದ ಬಿಎಸ್ಎಫ್ ಯೋಧ ದುರ್ಗಪ್ಪ ನಾಯಕ ಮಾತನಾಡಿ, ದೇಶಸೇವೆ ಮಾಡಿ ಮರಳಿ ಸ್ವಗ್ರಾಮಕ್ಕೆ ಬರುವ ನಮ್ಮಂಥ ಸೈನಿಕರನ್ನು ನಾಗರಿಕರು ಅಭಿಮಾನದಿಂದ ಸ್ವಾಗತಿಸಿ ಸಂಭ್ರಮಿಸಿದ್ದು ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ಅದೇ ರೀತಿ ನಮ್ಮ ತಾಲೂಕಾಡಳಿತ ನಿವೃತ್ತಿ ಹೊಂದಿ ಮರಳಿ ಸ್ವಗ್ರಾಮಕ್ಕೆ ಆಗಮಿಸುವ ಎಲ್ಲ ಯೋಧರಿಗೆ ಸಕರ್ಾರಿ ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡಬೇಕಿದೆ ಸಾಕಷ್ಟು ಕಡೆ ಸೈನಿಕರು ಸಕರ್ಾರಿ ಕಚೇರಿಗಳಿಗೆ ಅಲೆಯುವಂತ ಸ್ಥಿತಿ ಬಂದಿದೆ ಎಂದರು.

ರೋಜಾ ಮಲ್ಲಿಕಾಜರ್ುನ ಮುತ್ಯಾ, ಪಿಐ ಚನ್ನಯ್ಯ ಹಿರೇಮಠ, ನಿವೃತ್ತ ದೈಹಿಕ ಶಿಕ್ಷಕ ಸುಧಾಕರ ಗುಡಿ, ಸೋಮಶೇಖರ ಹಿರೇಮಠ, ಯುವ ಮುಖಂಡ ಭೀಮಣ್ಣ ಶಖಾಪುರ, ಸಿದ್ದು ಪಟ್ಟೇದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net