ತವರಿನತ್ತ ಮುಖ ಮಾಡಿದ ಯಾತ್ರಿಕರು

bhadrinath
Published on

ಬೀದರ್: ಉತ್ತರಾರಖಂಡದ ಕೇದಾರನಾಥ ಯಾತ್ರೆಗೆ ತೆರಳಿದ್ದ ವೇಳೆ ಭಾರಿ ಮಳೆ ಮತ್ತು ಗುಡ್ಡ ಕುಸಿತದಲ್ಲಿ ಸಿಲುಕಿಕೊಂಡಿದ್ದ ಕಲಬುರಗಿ ಮತ್ತು ಬೀದರ್ ಜಿಲ್ಲೆಯ 16 ಜನರು ಸುರಕ್ಷಿತವಾಗಿ ತವರಿನತ್ತ ಮುಖ ಮಾಡಿದ್ದಾರೆ.
ಜಿಲ್ಲೆಯ 6 ಮತ್ತು ನೆರೆಯ ಕಲಬುರಗಿಯ 10 ಜನ ಸೇರಿ ಜು.16ರಂದು ಕೇದಾರನಾಥ ಇತರೆಡೆ ಪ್ರವಾಸ ಕೈಗೊಂಡಿದ್ದರು. ಗುರುವಾರ ಕೇದಾರನಾಥ ದರ್ಶನ ನಂತರ ಭಾರಿ ಮಳೆಯಿಂದ ವಿವಿಧೆಡೆ ಗುಡ್ಡ ಕುಸಿದಿದೆ. ಅಲ್ಲಿಂದ ಹೋಗಲು ಸಹ ಬಹಳಷ್ಟು ಅಡಚಣೆಯಾಗಿದೆ. ನಂತರ ರಸ್ತೆಯಲ್ಲಿ ಬಿದ್ದಿದ್ದ ಮಣ್ಣು ತೆಗೆದ ನಂತರ ಯುವಕರ ತಂಡ ಪ್ರಯಾಣ ಬೆಳೆಸಿ ಶುಕ್ರವಾರ ಬದ್ರಿನಾಥ ದರ್ಶನ ಮಾಡಿದೆ.
ಔರಾದ್ ತಾಲೂಕಿನ ಹೆಡಗಾಪುರ ಗ್ರಾಮದ ಮಹೇಶ, ಭೀಮಾಶಂಕರ, ವೈಭವ, ನಗರದ ಆಕಾಶ, ಬಸವಕಲ್ಯಾಣದ ಪ್ರಮೋದ, ಸಚಿನ್ ಹಾಗೂ ಕಲಬರುಗಿ ಜಿಲ್ಲೆಯ 10 ಜನ ಪ್ರವಾಸಕ್ಕೆ ಹೋಗಿದ್ದರು.
ಭಾರಿ ಮಳೆ ಹಾಗೂ ಗುಡ್ಡ ಕುಸಿತದಿಂದ ಬಹಳಷ್ಟು ಆತಂಕಗೊಂಡಿದ್ದೆವು. ಆದರೀಗ ತೊಂದರೆ ಇಲ್ಲ. ಎಲ್ಲರೂ ಸುರಕ್ಷಿತವಾಗಿ ತವರಿಗೆ ಬರುತ್ತಿದ್ದೇವೆ. ಸ್ಥಳೀಯರ ನೆರವಿನೊಂದಿಗೆ ಇದು ಸಾಧ್ಯವಾಗಿದೆ. ಭಾನುವಾರ ನವದೆಹಲಿಗೆ ತಲುಪಿ ಅಲ್ಲಿಂದ ವಿಮಾನದ ಮೂಲಕ ಸೋಮವಾರ ಮನೆ ಸೇರಲಿದ್ದೇವೆ ಎಂದು ಮಹೇಶ ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net