ತಳವಾರರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡಿ

oppo_2
oppo_2
Published on

ಕಲಬುರಗಿ: ನ್ಯಾಯಾಲಯದ ಆದೇಶದಂತೆ, ಸಂವಿಧಾನದ ತಿದ್ದುಪಡಿ ಪ್ರಕಾರ ರಾಜ್ಯದಲ್ಲಿನ ತಳವಾರ ಜಾತಿಯವರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆ ಮಾಡಿದ್ದು, ಎಸ್‌ಟಿ ಪ್ರಮಾಣ ಪತ್ರವನ್ನು ನೀಡಬೇಕು ಎಂದು ರಾಜ್ಯ ತಳವಾರ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಕಾAತ ತಳವಾರ ಆಗ್ರಹಿಸಿದರು.
ತಳವಾರರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡುತ್ತಿರುವುದರ ವಿರುದ್ಧ ವಾಲ್ಮೀಕಿ ನಾಯಕ ಜನಾಂಗದವರು ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ತಳವಾರರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡಬಹುದು ಎಂದು ಕೋರ್ಟ್ ಮಧ್ಯಂತರ ಆದೇಶ ನೀಡಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್‌ಟಿ ಪ್ರಮಾಣ ಪತ್ರಕ್ಕೆ ಸಂಸತ್ತಿನಲ್ಲಿ ಅನುಮೋದನೆಯಾಗಿ, ರಾಷ್ಟçಪತಿಗಳ ಅಂಕಿತದ ಮೂಲಕ ಭಾರತ ಸರ್ಕಾರ ಗೆಜೆಟಿನಲ್ಲಿ ಪ್ರಕಟಿಸಿದೆ. ರಾಜ್ಯ ಸರ್ಕಾರವೂ ಗೆಜೆಟ್‌ನಲ್ಲಿ ಸುತ್ತೋಲೆ ಹೊರಡಿಸಿದೆ. ಅದರಂತೆ ಪ್ರಮಾಣ ಪತ್ರ ವಿತರಿಸಲಾಗುತ್ತಿದೆ. ಕೋರ್ಟ್ ಆದೇಶ, ದಾಖಲೆಗಳಿದ್ದರೂ ಕೆಲವರು ಅನಗತ್ಯ ಗೊಂದಲ, ಸುಳ್ಳು ಸೃಷ್ಟಿಸುತ್ತಿದ್ದಾರೆ. ಸರ್ಕಾರ ಮತ್ತು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಪ್ರಮಾಣ ಪತ್ರಕ್ಕೆ ತೊಡಕು ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭೇಟಿ ಮಾಡಿರುವ ಕೆಲವು ಶಾಸಕರು ತಳವಾರರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡದಂತೆ ಮನವಿ ಮಾಡಿದ್ದಾರೆ. ಸಿಎಂ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯಬಾರದು ಎಂದು ಆಗ್ರಹಿಸಿದರು.
ಪ್ರಥ್ವಿರಾಜ ತಳವಾರ, ರಾಜೇಂದ್ರ ತಳವಾರ, ಶಿವಕುಮಾರ ಫಿರೋಜಾಬಾದ್, ಗುರು ಹಾವನೂರ, ಸಂತೋಷ ಅಫಜಲಪುರ, ಗುರು ಕಿರಣಗಿ, ಸಿದ್ದು ಬಿದನೂರ, ಗಿರೀಶ ಜೇವರ್ಗಿ, ರವಿ ಡೊಂಗರಗಾAವ, ರಾಜೇಂದ್ರ ಸಿರಸಗಿ, ಬಸವರಾಜ ಸುಣಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net