ತಳಕು ಬಳಿ ಹೆದ್ದಾರಿ ತಡೆ

CLK PRATIBHATANE 13
Published on

ಚಳ್ಳಕೆರೆ: ತಳಕು ಹೋಬಳಿ ಹಿರೇಹಳ್ಳಿ, ಬಿ.ಜಿ.ಕೆರೆ, ಹಾನಗಲ್ ಗ್ರಾಮಗಳಿಗೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ದಸಂಸ (ಹೆಣ್ಣೂರು ಶ್ರೀನಿವಾಸ್ ಬಣ), ರೈತಸಂಘ ಕಾರ್ಯಕರ್ತರು ತಳಕು ಬಳಿ ಶುಕ್ರವಾರ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ ಸೇತುವೆ ಮೂಲಕ ನೇರ ಬಸ್ಸುಗಳು ಹಾದು ಹೋಗುವುದರಿಂದ ಈ ಪ್ರದೇಶದ ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆ ಸಮಸ್ಯೆ ತೀವ್ರಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿ ಮತ್ತು ಚಳ್ಳಕೆರೆ ನಗರದ ಮೂಲಕ ಆಗಮಿಸಿದ ಪ್ರಯಾಣಿಕರು ಪರದಾಡುವಂತಾಗಿದೆ. ಆದ್ದರಿಂದ ಕೂಡಲೇ ಈ ಗ್ರಾಮಗಳಲ್ಲಿ ಬಸ್ ನಿಲುಗಡೆಗೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಆದೇಶಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಮುಖಂಡರಾದ ಕನಕ ಶಿವಮೂರ್ತಿ, ಕೋನಸಾಗರ ಮಂಜುನಾಥ, ಚಂದ್ರಶೇಖರ್, ನಿಂಗಣ್ಣ, ಟಿ.ಮಂಜಣ್ಣ, ನಾಗಭೂಷಣ್, ದಸಂಸ ಸಂಘಟನೆಯ ಎಸ್.ರಾಜಣ್ಣ, ಆರ್.ರುದ್ರಮುನಿ, ಹೊನ್ನೂರು ಮಾರಣ್ಣ, ವಲಸೆ ತಿಪ್ಪೇಸ್ವಾಮಿ, ಮಂಜುನಾಥ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net