

ಎಚ್.ಡಿ.ಕೋಟೆ: ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಿ ತಳ ಸಮುದಾಯಕ್ಕೆ ಸಮಾನತೆ ನೀಡಿದ ಮಹಾತ್ಮ ಬ್ರಹ್ಮರ್ಷಿ ನಾರಾಯಣಗುರು ಎಂದು ಸಾಹಿತಿ ಡಾ.ಕಿರಣ್ ಸಿಡ್ಲೇಹಳ್ಳಿ ತಿಳಿಸಿದರು.
ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ಆಯೋಜಿಸಿದ್ದ ಬ್ರಹ್ಮರ್ಷಿ ನಾರಾಯಣ ಗುರುಗಳ 169 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ತಳ ಸಮುದಾಯಗಳು ಒಂದು ರೀತಿಯಲ್ಲಿ ಶೋಷಣೆಗೆ ಒಳಪಟ್ಟಿದ್ದರು. ಬಸವಣ್ಣ, ಪೆರಿಯಾರ್, ನಾರಾಯಣಗುರು, ಡಾ.ಬಿ.ಆರ್.ಅಂಬೇಡ್ಕರ್ ಇಂತಹ ಸಮಾಜ ಸುಧಾರಕರಿಂದ ತಳ ಸಮುದಾಯಗಳು ಗೌರವಯುತವಾಗಿ ಬದುಕಲು ಸಾಧ್ಯವಾಯಿತು. ನಾರಾಯಣಗುರುಗಳು ತಮ್ಮ ಹೋರಾಟದ ಮೂಲಕ ಅಸಮಾನತೆಯನ್ನು ಸರಿಪಡಿಸಿದರು. ತಳ ಸಮುದಾಯದ ಜನರಿಗೆ ದೇವಸ್ಥಾನಗಳಿಗೆ ಪ್ರವೇಶ ನೀಡದಿದ್ದಾಗ ತಾವೇ 80 ಕ್ಕೂ ಹೆಚ್ಚು ದೇವಸ್ಥಾನಗಳನ್ನು ಸ್ಥಾಪಿಸಿದರು ಎಂದರು.
ತಹಸೀಲ್ದಾರ್ ಎಲ್.ಸಣ್ಣರಾಮಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಇಒ ಧರಣೇಶ್, ಸರಗೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಅಧಿಕಾರಿಗಳಾದ ಡಾ.ರವಿಕುಮಾರ್, ಎಇಇ ನಾಗರಾಜ್, ಗೋವಿಂದನಾಯಕ, ರಾಮಸ್ವಾಮಿ, ಮಹೇಶ್, ರೇಣುಕಾಸ್ವಾಮಿ, ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎಸ್.ಎನ್. ರಂಗೇಗೌಡ, ಟೌನ್ ಅಧ್ಯಕ್ಷ ಅನಿಲ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಪ್ರಮೋದ, ವರ್ತಕರ ಸಂಘದ ಅಧ್ಯಕ್ಷ ವಿನಯ್, ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಸುಧಾಕರ್, ಮುಖಂಡರಾದ ನಂಜುಂಡೇಗೌಡ, ನಾಗಣ್ಣ, ಮುತ್ತುರಾಜು, ಶಂಕರ್, ಸೌಮ್ಯಾ, ಶೈಲಾ, ಸುಧಾಮಣಿ, ಅನುಷಾ ಇದ್ದರು.