

ಹಾಸನ: ಮಹಿಳೆ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ರೈಲ್ವೇ ನಿಲ್ದಾಣ ಬಳಿ ನಡೆದಿದೆ.
ಗುರುವಾರ ಮುಂಜಾನೆ ಈ ಕೃತ್ಯ ನಡೆದಿರುವ ಸಾಧ್ಯತೆ ಇದ್ದು, ಹೊಸದಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ಇಲಾಖೆಗೆ ಸೇರಿದ ಕಟ್ಟಡದೊಳಗೆ ಕೊಲೆ ಮಾಡಲಾಗಿದೆ. ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮಹಿಳೆ ಯಾರೆಂಬುದು ತಿಳಿದು ಬಂದಿಲ್ಲ. ರಕ್ತದ ಕಲೆಯಿಂದ ಮುಖ ವಿರೂಪ ಆಗಿದೆ. ಅಂದಾಜು 35-40 ವರ್ಷದ ಮಹಿಳೆಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.