ತಲೆಯ ಮೇಲೆ ಗೇಟ್ ಬಿದ್ದು ಬಾಲಕ ಸಾವು

Published on

ಹುಬ್ಬಳ್ಳಿ: ಮಂಟೂರ ರಸ್ತೆಯ ಗಣೇಶ ಕಾಲನಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದರ ಕಬ್ಬಿಣದ ಗೇಟ್ ಹಿಡಿದು ಆಟವಾಡುತ್ತಿದ್ದ ಬಾಲಕನ ತಲೆ ಮೇಲೆ ಆಕಸ್ಮಿಕವಾಗಿ ಗೇಟ್ ಬಿದ್ದು ಗಾಯಗೊಂಡಿದ್ದು, ಚಿಕಿತ್ಸೆ ಫಲಿಸದೆ ಕಿಮ್ಸ್​ನಲ್ಲಿ ಮಂಗಳವಾರ ಮೃತಪಟ್ಟಿದ್ದಾನೆ.

ಬ್ಯಾಳಿ ಪ್ಲಾಟ್ ನಿವಾಸಿ ಮಹ್ಮದ್ ಅಭಾಖಾನ್ (7) ಮೃತ ಬಾಲಕ. ಗುಲಾಮ ಹುಸೇನ ಜಂಗ್ಲಿ ಎಂಬುವರ ಮನೆಯ ಗೇಟ್ ಹಿಡಿದು ಬಾಲಕ ಆಟವಾಡುತ್ತಿದ್ದ. ಈ ವೇಳೆ ಬಾಲಕನ ಮೇಲೆ ಗೇಟ್ ಬಿದ್ದಿದೆ. ನೆಲದ ಮೇಲಿದ್ದ ಫ್ಲೈವುಡ್ ತಲೆಗೆ ಬಡಿದಿದ್ದರಿಂದ ಮಹ್ಮದ್ ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಸ್ಥಳೀಯರು ಬಾಲಕನನ್ನು ಕಿಮ್ಸ್​ನಲ್ಲಿ ದಾಖಲಿಸಿದ್ದರು. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net