ತಲೆಮರೆಸಿಕೊಂಡಿದ್ದವರಿಗೆ ತಲೆಬಿಸಿ

images-12.jpeg
Published on

ಕಾರವಾರ: ಪೊಲೀಸರಿಗೆ ತಮ್ಮ ಗುರುತು ಮರೆತು ಹೋಯ್ತು ಎಂದು ನಿರಾಳವಾಗಿ ಓಡಾಡಿಕೊಂಡಿರುವ ಆರೋಪಿಗಳಿಗೆ ತಲೆಬಿಸಿ ಶುರುವಾಗಿದೆ.
ಎಸ್ ಪಿ ಡಾ.ಸುಮನ್ ಪೆನ್ನೇಕರ್ ಸೂಚನೆಯಂತೆ ಜಿಲ್ಲೆಯಲ್ಲಿ ಹಳೆಯ ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಇಂಥ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ.
ಭಟ್ಕಳದ ಗಲಭೆ ಪ್ರಕರಣವೊಂದರಲ್ಲಿ 1978 ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 44 ವರ್ಷಗಳ ನಂತರ ಆರೋಪಿಯನ್ನು ಬಂಧಿಸಲಾಗಿದೆ.
ಕಾರವಾರ ಗ್ರಾಮೀಣ ಠಾಣೆಯ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 34 ವರ್ಷಗಳ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಇದೇ ರೀತಿ, ಕದ್ರಾ, ಕಾರವಾರ ಶಹರ, ಚಿತ್ತಾಕುಲಾ ಠಾಣೆಗಳಲ್ಲಿ ದಾಖಲಾಗಿದ್ದ ಹತ್ತಾರು ವರ್ಷ ಹಿಂದಿನ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್.ಪಿ.ಕಚೇರಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net