ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

25-npk-3
Published on


ನಾಪೋಕ್ಲು: ಗೋಮಾಂಸ ಸಾಗಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬುಧವಾರ ಸಂಜೆ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಅಸ್ಸಾಂ ಮೂಲದ ಆರೋಪಿ ಚಾನ್ ಮಿಯಾ ಆಲಿ (27) ಬಂಧಿತ ಆರೋಪಿ.
ಕಾಫಿತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಅಸ್ಸಾಮಿ ಕಾರ್ಮಿಕರು 2021ರ ಸೆ.8ರಂದು ಚೋನಕೆರೆ ಎಂಬಲ್ಲಿ ಸಂಶಯಾಸ್ಪದವಾಗಿ ಬ್ಯಾಗ್ ಸಮೇತ ರಸ್ತೆಯಲ್ಲಿ ತೆರಳುತ್ತಿದ್ದಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ಬಂಧಿಸಿದ್ದರು.


ಅಸ್ಸಾಂ ಉದಲ್ಗಿರಿ ನಿವಾಸಿಗಳಾದ ಷಹಜಾನ್ ಆಲಿ (40) ಸೈದುಲ್ ಇಸ್ಲಾಂ (22) ಅವರನ್ನು ಬಂಧಿಸಿದ ಪೊಲೀಸರು 12 ಕೆ.ಜಿ. ಗೋಮಾಂಸ ಹಾಗೂ ಚರ್ಮ ವಶಪಡಿಸಿಕೊಂಡಿದ್ದರು. ಮತ್ತೊಬ್ಬ ಆರೋಪಿ ಆರೋಪಿ ಚಾನ್ ಮಿಯಾ ಆಲಿ (27) ತಲೆಮರೆಸಿಕೊಂಡಿದ್ದ.


ಚೋನಕೆರೆಯ ಬಸ್ ತಂಗುದಾಣದಲ್ಲಿ ಬುಧವಾರ ಸಂಜೆ ಪೊಲೀಸರು ಆಲಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಡಿವೈಎಸ್ಪಿ ಅನುಪ್ ಮಾದಪ್ಪ ಅವರ ಮಾರ್ಗದರ್ಶನದಲ್ಲಿ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಸದಾಶಿವ ನೇತೃತ್ವದಲ್ಲಿ ದಫೇದಾರರಾದ ರವಿ, ಲವ, ಪೊಲೀಸ್ ಸಿಬ್ಬಂದಿ ಶರತ್‌ಕುಮಾರ್ ಆರೋಪಿ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net