

ಯಾದಗಿರಿ: ನಗರ ಪ್ರದೇಶ ಅಭಿವೃದ್ದಿಯ ವೇಗ ಪಡೆದುಕೊಂಡಿದ್ದು, ಆದರೆ ಗ್ರಾಮೀಣ ಪ್ರದೇಶಗಳು ತೀರಾ ನಿರ್ಲಕ್ಷÈಕ್ಕೆ ಒಳಪಟ್ಟ ಕಾರಣ ಮಾನವ ಸೂಚ್ಯಂಕದಲ್ಲಿ ಹಿಂದುಳಿದಿz್ದೆÃವೆ. ಹೀಗಾಗಿ ಗ್ರಾಮೀಣ ಜನರ ತಲಾ ಆದಾಯ ಹೆಚ್ಚಿಸಲು ಆದ್ಯತೆ ನೀಡಬೇಕಿದೆ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿ ಸದಸ್ಯ ಡಾ.ಎಸ್.ಟಿ.ಬಾಗಲಕೋಟೆ ಹೇಳಿದರು.
ಇಲ್ಲಿನ ಜಿಪಂ ಕಚೇರಿಯಲ್ಲಿ ಹಿಂದುಳಿದ ಪ್ರದೇಶದಲ್ಲಿ ಇದುವರೆಗಿನ ಅಭಿವೃದ್ಧಿ ಹೊಂದಿರುವ ಆಧಾರದ ಮೇಲೆ ಹೊಸದಾಗಿ ಸೂಚ್ಯಂಕ ನಿಗದಿಪಡಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆ, ಸಂಘ-ಸAಸ್ಥೆಗಳೊAದಿಗೆ ಬುಧವಾರ ಸಮಿತಿಯಿಂದ ಕರೆದಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಕೃಷಿಯೇ ಪ್ರಧಾನವಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ತಲಾ ಆದಾಯ ವೃದ್ಧಿಯಾಗದ ಹೊರತು ಮಾನವ ಸೂಚ್ಯಂಕ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದರು.
ಇತ್ತೀಚಿನ ದಿನಗಳಲ್ಲಿ ಖಾಸಗಿ ಕ್ಷೇತ್ರ ತೀವ್ರಗತಿಯಲ್ಲಿ ಪ್ರಗತಿ ಕಾಣುತ್ತಿರುವುದರಿಂದ ಪ್ರದೇಶದ ಅಭಿವೃದ್ಧಿಗೆ ಅವರ ಸಹಕಾರ ಅಗತ್ಯವಿದೆ. ಸಿಎಸ್‌ಆರ್ ನೆರವು ಪಡೆಯುವುದು, ಪಿಪಿಪಿ ಮಾದರಿಯಲ್ಲಿ ಯೋಜನೆ ಸಾಕಾರಗೊಳಿಸುವ ಅಗತ್ಯವಿದೆ ಎಂದರು.
ಡಾ.ಡಿ.ಎA.ನAಜುAಡಪ್ಪ ಅವರ ೨೦೦೨ರ ವರದಿಯಲ್ಲಿ ಅಂದಿನ ೧೭೬ ತಾಲೂಕುಗಳನ್ನು ಹಿಂದುಳಿದ, ಅತಿ ಹಿಂದುಳಿದ, ಅತ್ಯಂತ ಹಿಂದುಳಿದ ಹಾಗೂ ಅಭಿವೃದ್ದಿ ಹೊಂದಿದ ತಾಲೂಕುಗಳೆಂದು ೪ ವರ್ಗದಲ್ಲಿ ವರ್ಗೀಕರಿಸಿ ಅದಕ್ಕನುಗುಣವಾಗಿ ಅನುದಾನ ಹಂಚಿಕೆಗೆ ಶಿಫಾರಸು ಮಾಡಿದ್ದರು.
ಅದರಂತೆ ೨೦೦೭-೦೮ರಿಂದ ೨೦೧೫-೧೬ರ ವರೆಗೆ ಹಾಗೂ ನಂತರ ಒಟ್ಟಾರೆ ೪೫ ಸಾವಿರ ಕೋಟಿ ರೂ. ಹಿಂದುಳಿದ ಪ್ರದೇಶಕ್ಕೆ ಹಂಚಿಕೆಯಾಗಿ ೩೪ ಸಾವಿರ ಕೋಟಿ ರೂ. ಖರ್ಚಾದರೂ ಸಹಿತ ದಕ್ಷಿಣ ಕರ್ನಾಟಕದ ಜಿ¯್ಲÉಗಳಿಗೆ ಹೊಲಿಸಿದರೆ ಉತ್ತರ ಕರ್ನಾಟಕ ಭಾಗದ ವಿಶೇಷವಾಗಿ ಯಾದಗಿರಿ ಸೇರಿ ಕಲ್ಯಾಣ ಕರ್ನಾಟಕ ಭಾಗದ ಜಿ¯್ಲÉಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ ಕನಿಷ್ಠ ಮೂಲಸೌಕರ್ಯಗಳಿಂದ ಸಹ ವಂಚಿತ ಪ್ರದೇಶ ಇದಾಗಿದೆ ಎಂದು ವಿವರಿಸಿದರು.
ಬೆಂಗಳೂರು ನಗರದಿಂದಲೇ ರಾಜ್ಯದ ಬೊಕ್ಕಸಕ್ಕೆ ಶೇ.೩೮ ಆದಾಯ ಬರುತ್ತಿದೆ. ರಾಜ್ಯಕ್ಕೆ ಹೋಲಿಸಿದರೆ ಯಾದಗಿರಿ ಜಿ¯್ಲÉಯಿಂದ ಶೇ.೧, ರಾಯಚೂರು ಜಿ¯್ಲÉಯಿಂದ ಶೇ.೧.೭೭ ಆದಾಯ ಬರುತ್ತದೆ. ಇನ್ನು ರಾಜ್ಯದ ಸರಾಸರಿ ತಲಾ ಆದಾಯ ೨.೨೦ ಲP್ಷÀ ರೂ.ಗಳಿದ್ದರೆ ಯಾದಗಿರಿ ತಲಾ ಆದಾಯ ೧.೩೫ ಲP್ಷÀ ರೂ. ಆಗಿದೆ. ೨ನೇ ಮತ್ತು ೩ನೇ ಹಂತದ ನಗರಗಳು ಔದ್ಯೋಗಿಕವಾಗಿ ಬೆಳೆಸುವ ಮೂಲಕ ತಲಾ ಆದಾಯದಲ್ಲಿನ ಈ ಅಸಮಾನತೆಯನ್ನು ಹೋಗಲಾಡಿಸಬೇಕಿದೆ ಎಂದರು.
ಜಿ¯್ಲÁಧಿಕಾರಿ ಡಾ.ಬಿ.ಸುಶೀಲಾ ಪ್ರಾಸ್ತಾವಿಕವಾಗಿ ಮಾತನಾಡಿ, ಜಿ¯್ಲÉಯ ಭೌಗೋಳಿಕ ಇತಿಹಾಸದ ಜತೆಗೆ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಎಸ್‌ಡಿಪಿ ಯೋಜನೆಯಡಿ ಕೈಗೊಂಡ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿ ಸದಸ್ಯೆ ಸಂಗೀತಾ ಕೆ.ಎನ್., ಜಿಪಂ ಸಿಇಒ ಲವೀಶ್ ಓರ್ಡಿಯಾ, ಅಪರ ಜಿ¯್ಲÁಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಇತರರಿದ್ದರು.