

ಮೈಸೂರು: ತಲಸ್ಸೇಮಿಯಾ ಎಂಬ ಕಾಯಿಲೆಯಿಂದ ಬಳಲುತ್ತಿರುವ 9 ವರ್ಷದ ಬಾಲಕಿಗೆ ಆರ್ಥಿನ ನೆರವು ಬೇಕಾಗಿದೆ.
ಚಾಮರಾಜನಗರ ಜಿಲ್ಲೆಯ ಅಂಕನಶೆಟ್ಟಿಪುರ ಗ್ರಾಮದಲ್ಲಿರುವ ವಾಸವಾಗಿರುವ 9 ವರ್ಷದ ಆದ್ಯ ಎಂಬ ನಮ್ಮ ಮಗಳಿಗೆ ಹುಟ್ಟಿನಿಂದಲೇ ದೇಹದಲ್ಲಿ ರಕ್ತ ಉತ್ಪಾದನೆಯಿಲ್ಲದೆ ತಲಸ್ಸೇಮಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾಳೆ.
ಹುಟ್ಟಿದಾಗಿನಿಂದಲೂ ಮಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಪ್ರತಿ ಮೂರು ವಾರಕ್ಕೊಮ್ಮೆ ರಕ್ತ ಕಡಿಮೆಯಾಗುತ್ತದೆ. ಆಗ ರಕ್ತ ನೀಡಬೇಕು. ಇಲ್ಲವಾದಲ್ಲಿ ಆಕೆ ಜೀವ ಕಳೆದುಕೊಳ್ಳಬೇಕಾದ ಸನ್ನಿವೇಶವಿದೆ ಎಂದು ಬಾಲಕಿಯ ತಂದೆ ಮಹದೇವಸ್ವಾಮಿ ಹಾಗೂ ತಾಯಿ ರಾಜೇಶ್ವರಿ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಯೂ ಜೀವಕ್ಕೆ ಹಾನಿಕಾರವೆಂದು ವೈದ್ಯರು ತಿಳಿಸಿದ್ದು, ಅವಳಿಗೆ ಶಾಶ್ವತ ಪರಿಹಾರಕ್ಕಾಗಿ ಮೂಳೆಯ ಮಜೆಯ ಕಸಿ (ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಷನ್) ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ಸುಮಾರು 35 ರಿಂದ 40 ಲಕ್ಷ ರೂ.ಅಂದಾಜಿಸಲಾಗಿದೆ.
ಬಡ ಕುಟುಂಬದವರಾಗಿರುವ ನಾವು, ವಯಸ್ಸಾದ ತಂದೆ, ತಾಯಿ ಹಾಗೂ ನನ್ನ ಸಂಸಾರ ನಡೆಸಲು ಸಣ್ಣ ಉದ್ಯೋಗ ಮಾಡುತ್ತಿದ್ದು ಚಿಕಿತ್ಸೆ ಮಾಡಿಸಲು ಆರ್ಥಿಕವಾಗಿ ತೊಂದರೆಯಾಗಿದೆ. ಆದ್ದರಿಂದ ಮಗಳ ಚಿಕಿತ್ಸೆಗಾಗಿ ದಾನಿಗಳು ನೆರವು ನೀಡುವಂತೆ ಕೋರಿದರು.
ಚಾಮರಾಜನಗರದ ಹರದನಹಳ್ಳಿಯಲ್ಲಿರುವ ಸ್ಟೇಟ್ ಬ್ಯಾಂಕ್ ಇಂಡಿಯಾ ಶಾಖೆಯ ಖಾತೆ ನಂ. 39484287006, ಐಎಸ್‌ಎಸ್‌ಸಿ ನಂಬರ್ ಎಸ್‌ಬಿಐ 0040764 ಆಗಿದೆ. ಮೊಬೈಲ್ ಸಂಖ್ಯೆ 97317 39777ಗೆ ಯುಪಿಐ ವ್ಯವಸ್ಥೆ ಇದೆ. ದಾನಿಗಳು ನೆರವು ನೀಡಬೇಕು ಎಂದು ಕೋರಿದರು.