ತಲವಾರ ಪ್ರದರ್ಶಿಸಿದ ಇಬ್ಬರ ಬಂಧನ

Oplus_16908288
Oplus_16908288
Published on

ಬೆಳಗಾವಿ: ಸಾರ್ವಜನಿಕ ಸ್ಥಳದಲ್ಲಿ ತಲವಾರ ಹಿಡಿದು ಜನರಿಗೆ ಭಯ ಹುಟ್ಟುವಂತೆ ವರ್ತಿಸಿದ್ದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿರುವ ಟನೆ ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದ ಬಳಿ ನಡೆದಿದೆ.

ಬೆಳಗಾವಿ ತಾಲೂಕಿನ ಬಮ್ಮನಟ್ಟಿ ಗ್ರಾಮದ ನಿವಾಸಿ ಹಾಲಪ್ಪ ದ್ಯಾಮಪ್ಪ ಕಾಟಾಬಳಿ (25), ಹುಕ್ಕೇರಿ ತಾಲೂಕಿನ ಚಿಕಲದಿನ್ನಿ ಗ್ರಾಮದ ನಿವಾಸಿ ನಾಗರಾಜ ದ್ಯಾಮಪ್ಪ ಕಟಾಬಳಿ (21) ಬಂಧಿತರು. ಇವರು ಈಚೆಗೆ ಶಹಾಬಂದರ ಕ್ರಾಸ್​ ಬಳಿಯ ವಾಲ್ಮೀಕಿ ಸರ್ಕಲ್​ ಬಳಿ ಕೈಯಲ್ಲಿ ತಲವಾರ ಹಿಡಿದು ಅಲ್ಲಿ ಓಡಾಡುವ ಜನರಿಗೆ ಭಯದ ವಾತಾವರಣ ನಿರ್ಮಾಣ ಮಾಡಿದ್ದರು. ವಿಷಯ ತಿಳಿದು ಯಮಕನಮರಡಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಯಮಕನಮರಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net