

ಮೈಸೂರು: ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್-ತ್ರಿಷಿಕಾ ಒಡೆಯರ್ ದಂಪತಿ ಪಂಚಲಿಂಗ ದರ್ಶನ ಹಿನ್ನೆಲೆಯಲ್ಲಿ ಬುಧವಾರ ತಲಕಾಡಿನ ಶ್ರೀ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಯದುವೀರ್ ಕೃಷ್ಣದತ್ತ ಒಡೆಯರ್ ಹಾಗೂ ತ್ರಿಷಿಕಾ ಒಡೆಯರ್ ವಿವಾಹವಾದ ನಂತರ ಎದುರಾದ ಪ್ರಥಮ ಪಂಚಲಿಂಗ ದರ್ಶನ ಇದಾಗಿದೆ. ಒಡೆಯರ್ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಸಂದರ್ಭ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಯದುವೀರ್, ನಾಡಿಗೆ ಒಳಿತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.