ತರಬೇತಿಗೆ ಅರ್ಜಿ ಆಹ್ವಾನ

Published on

ಚಾಮರಾಜನಗರ: ಎಸ್.ಬಿ.ಐ ಗ್ರಾಮೀಣ ಸ್ವ ಉದ್ಯೋಗ ತರಭೇತಿ ಸಂಸ್ಥೆ ವತಿಯಿಂದ ಗ್ರಾಮೀಣ ಭಾಗದ ನಿರುದ್ಯೋಗ ಯುವಕ-ಯುವತಿಯರಿಗೆ ಊಟ-ವಸತಿಗಳೊಂದಿಗೆ ಉಚಿತ 30 ದಿನಗಳ ಮಹಿಳಾ ಹೊಲಿಗೆ ತರಬೇತಿ ಮತ್ತು 10 ದಿನಗಳ ಹೈನುಗಾರಿಕೆ ಮತ್ತು ಏರೆಹುಳ ಗೊಬ್ಬರ ತಯಾರಿಕೆ ತರಬೇತಿಯನ್ನು ನೀಡಲಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಸಕ್ತ 18 ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ ನಕಲು ಪ್ರತಿ ಮತ್ತು 4 ಭಾವಚಿತ್ರಗಳನ್ನು ಸಲ್ಲಿಸಬೇಕು. ತರಬೇತಿಯನ್ನು ತಾಲ್ಲೂಕಿನ ಮಾದಾಪುರದ ಸಂತೆಮರಳ್ಳಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟಲ್ ಕಟ್ಟಡದ ಎಸ್.ಬಿ.ಐ ಗ್ರಾಮೀಣ ಸ್ವ ಉದ್ಯೋಗ ತರಭೇತಿ ಸಂಸ್ಥೆಯಲ್ಲಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ 9606098878, 8722483393, 9739067155 ಸಂಪರ್ಕಿಸಬಹುದು ಎಂದು ಎಸ್.ಬಿ.ಐ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net