

ಚಾಮರಾಜನಗರ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 2024-25ನೇ ಸಾಲಿಗೆ ಪರಿಶಿಷ್ಟ ಪಂಗಡ ಜನಾಂಗದ ನಿರುದ್ಯೋಗಿ ಯುವಕ, ಯುವತಿಯರಿಗೆ ಲಘು ವಾಹನ ತರಬೇತಿ, ಟೈಲರಿಂಗ್ (ಹೆಣ್ಣುಮಕ್ಕಳಿಗೆ), ಕಂಪ್ಯೂಟರ್ ತರಬೇತಿ, ಅಗರ್ ಬತ್ತಿ ತಯಾರಿಕೆ, ಮೇಣದಬತ್ತಿ ತಯಾರಿಕೆ, ವೈರ್ ಅಥವಾ ಬಿದಿರು ಬುಟ್ಟಿ ತಯಾರಿಕೆ ಮತ್ತು ಜೇನು ಕೃಷಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ನಿರುದ್ಯೋಗಿ ಅಭ್ಯರ್ಥಿಗಳು ಷರತ್ತು ಮತ್ತು ನಿಬಂಧನೆಗಳಿಗೊಳಪಟ್ಟು ಅರ್ಜಿಯನ್ನು ನಗರದ ಕೊಳದ ಬೀದಿಯ ಶಿವು ಡ್ರೈವಿಂಗ್ ಸ್ಕೂಲ್ ಹತ್ತಿರದ ತಾಲೂಕು ಪರಿಶಿಷ್ಟವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಡಿ.31 ರೊಳಗೆ ಸಲ್ಲಿಸಬಹುದು.
ಒಬ್ಬ ಅಭ್ಯರ್ಥಿಯು ಒಂದು ತರಬೇತಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಒಂದಕ್ಕಿಂತ ಹೆಚ್ಚು ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಆಯ್ಕೆಯನ್ನು ರದ್ದುಗೊಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ 08226-223823 ಸಂಪರ್ಕಿಸುವಂತೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.