ತರಬೇತಿಗಳ ಸದುಪಯೋಗಕ್ಕೆ ಸಹಕಾರಿಗಳಿಗೆ ಸಲಹೆ

CTD CO-OP....
Published on

ಚಿತ್ರದುರ್ಗ: ಸಹಕಾರ ಶಿಕ್ಷಣ, ತರಬೇತಿ ಮತ್ತು ಪ್ರಚಾರ ರಾಜ್ಯ ಸಹಕಾರ ಮಹಾ ಮಂಡಳದ ಉದ್ದೇಶವಾಗಿದ್ದು, ಕಾಲಕಾಲಕ್ಕೆ ಏರ್ಪಡಿಸುವ ತರಬೇತಿ, ಮಾ ಹಿತಿ, ಶಿಕ್ಷಣ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳುವಂತೆ ಮಹಾ ಮಂಡಳದ ನಿರ್ದೇಶಕ ಆರ್. ರಾಮರೆಡ್ಡಿ ಸಹಕಾರಿಗಳಿಗೆ ಸಲಹೆ ನೀಡಿದರು.

ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಎಲ್ಲ ಮಹಿಳಾ ಸಹಕಾರ ಸಂಘಗಳ ವ್ಯವಸ್ಥಾಪಕರು, ಕಾರ್ಯದರ್ಶಿಗಳಿಗೆ ಶುಕ್ರವಾರ ನಗರದ ಸಹಕಾರ ಭವನದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ತರಬೇತಿ ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಮಾಹಿತಿ, ಶಿಕ್ಷಣ, ಪ್ರಚಾರದ ಅಗತ್ಯವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಎಚ್.ವಿ. ಪ್ರತಾಪಸಿಂಹ, ನಿರ್ದೇಶಕ ಜಿಂಕಲು ಬಸವರಾಜ್ ಮಾತನಾಡಿದರು. ನಿರ್ದೇಶಕರಾದ ಜಿ.ಇ. ಅಜ್ಜಪ್ಪ, ಎಚ್.ಎನ್.ತಿಪ್ಪೇಸ್ವಾಮಿ, ಜಿ.ಬಿ. ಶೇಖರಪ್ಪ, ಶಿಮುಲ್ ನಿರ್ದೇಶಕರಾದ ಕೆ.ಎಚ್. ಜಗನ್ನಾಥ್, ಎ. ಚನ್ನಬಸಪ್ಪ, ಜಿ.ಎನ್. ಹರೀಶ್, ಬಿ.ಸಿ. ಸಂಜೀವಮೂರ್ತಿ, ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ. ಶೇಖರ್, ಉಪ ವ್ಯವಸ್ಥಾಪಕ ಮುಕುಂದನಾಯ್ಕ, ಪ್ರಭಾರ ವ್ಯವಸ್ಥಾಪಕ ಸಿ.ಎ. ಕುಮಾರಸ್ವಾಮಿ, ವಿಸ್ತರಣಾಧಿಕಾರಿಗಳಾದ ಕೆ. ಕೃಷ್ಣಪ್ಪ, ಜಿ. ರವಿಚಂದ್ರ, ರಂಜಿತಾ, ಉಪನ್ಯಾಸಕ ಮಣಿಕಂಠ ಎನ್. ಟೆಕ್ಕೂರ್ ಇದ್ದರು. ಸೌಮ್ಯ ಸ್ವಾಗತಿಸಿ, ನಾಗರಾಜ ಪಾಟೀಲ ವಂದಿಸಿದರು. ಜಯಶ್ರೀ ಪಿ. ಹುನಗುಂದ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net