ತರಬೇತಿ ಕಾರ್ಯಾಗಾರ 25ರಿಂದ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ರಾಷ್ಟ್ರೀಯ ಅಂಕಿ ಸಂಖ್ಯೆಗಳ ಕಾರ್ಯಾಲಯ (ಎನ್​ಎಸ್​ಒ)ದ ಹುಬ್ಬಳ್ಳಿ ಪ್ರಾಂತೀಯ ಕಚೇರಿ ಹಾಗೂ ಬೆಳಗಾವಿ, ಬಳ್ಳಾರಿ ಮತ್ತು ಕಲಬುರಗಿ ಉಪ ಪ್ರಾಂತೀಯ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಆಧಾರದ ಸಿಬ್ಬಂದಿಗೆ ನ. 25ರಿಂದ ಡಿಸೆಂಬರ್ 21ರ ವರೆಗೆ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ.

ಹುಬ್ಬಳ್ಳಿ ಭಾಗ್ಯಲಕ್ಷ್ಮೀ ನಗರದಲ್ಲಿರುವ ಎನ್​ಎಸ್​ಎಸ್​ಒ ಭವನದಲ್ಲಿ ತರಬೇತಿ ನಡೆಯಲಿದೆ. ನ. 25ರಂದು ಬೆಳಗ್ಗೆ 10 ಗಂಟೆಗೆ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಉದ್ಘಾಟಿಸುವರು.

ಭಾರತ ಸರ್ಕಾರದ ಅಂಕಿ ಅಂಶ, ಯೋಜನಾ ಅನುಷ್ಠಾನ ಸಚಿವಾಲಯದಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಅಂಕಿ ಸಂಖ್ಯೆಗಳ ಕಾರ್ಯಾಲಯವು ವಿವಿಧ ವಲಯ, ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನು ಸಂಗ್ರಹಿಸಲು ದೀರ್ಘವಾದ ಸಮೀಕ್ಷೆಗಳನ್ನು ನಡೆಸುತ್ತದೆ. ಈ ಬಾರಿಯ ಸಮೀಕ್ಷೆಯ ಹಿನ್ನೆಲೆಯಲ್ಲಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಉಪ ನಿರ್ದೇಶಕ ಅಚ್ಚು ಶ್ರೀಕುಮಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net