ತರಬೇತಿ ಕಾರ‌್ಯಕ್ರಮ 24ಕ್ಕೆ

COOO
Published on

ಚಿತ್ರದುರ್ಗ: ನಗರದ ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಚಿತ್ರದುರ್ಗ ತಾಲೂಕು ಹಿರೇಗುಂಟನೂರು ಶ್ರೀ ದ್ಯಾಮಲಾಂಭ ಪ್ರೌಢಶಾಲಾ ಆವರಣದಲ್ಲಿ ಆ.24ರ ಬೆಳಗ್ಗೆ 8.30ಕ್ಕೆ, ನಾಡಗೀತೆ, ರಾಷ್ಟ್ರಗೀತೆ ಪ್ರಾಯೋಗಿಕ ಗಾಯನ ತರಬೇತಿ, ಕನ್ನಡ ಗೀತಗಾಯನ, ಕವಿ ಕಾವ್ಯ ಪರಿಚಯ ಹಾಗೂ ಯೋಗ ತರಬೇತಿ ಕಾರ‌್ಯಕ್ರಮ ಏರ್ಪಡಿಸಲಾಗಿದೆ. ಗ್ರಾಪಂ ಅಧ್ಯಕ್ಷೆ ಜಿ.ರಾಧಮ್ಮ ಹೇಮಣ್ಣ ಉದ್ಘಾಟಿಸುವರು. ಮುಖ್ಯಶಿಕ್ಷಕ ಟಿ.ಧನಂಜಯ ಅಧ್ಯಕ್ಷತೆ ವಹಿಸುವರು. ನಾನಾ ಗಣ್ಯರು ಕಾರ‌್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಸಂಘದ ಅಧ್ಯಕ್ಷ ಕೆ.ಮೋಹನ್‌ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net