ಗುಬ್ಬಿ: ತಾಲೂಕಿನ ಸಿ.ಎಸ್.ಪುರ ಹೋಬಳಿ ಅಂಕಳಕೊಪ್ಪದಲ್ಲಿ ಶುಕ್ರವಾರ ಸಂಜೆ ತಮ್ಮನ ಮಗನೇ ದೊಡ್ಡಪ್ಪನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಕರೀಂ ಸಾಬ್ (65) ಮೃತ. ಕರೀಂ ಸಾಬ್ನ ತಮ್ಮನ ಮಗ ಸಬ್ರೀಸ್ ಕೊಲೆ ಮಾಡಿ ತಲೆಮರೆಸಿಕೊಂಡಿದ್ದಾನೆ. ಜಮೀನಿನ ವಿಷಯಕ್ಕೆ ಅಣ್ಣ-&ತಮ್ಮಂದಿರ ನಡುವೆ ವ್ಯಾಜ್ಯವಿತ್ತು. ಶುಕ್ರವಾರ ಇದೇ ವಿಷಯಕ್ಕೆ ಗಲಾಟೆಯಾದಾಗ ಸಬ್ರೀಸ್ ದೊಡ್ಡಪ್ಪನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸಿಎಸ್ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಆರೋಪಿಯ ಪತ್ತೆಗಾಗಿ ಬಲೆ ಬಿಸಿದ್ದಾರೆ.