ತಮ್ಮಣ್ಣಗೌಡ ಕಂಚಿನ ಪುತ್ಥಳಿ ಅನಾವರಣ

IMG-20220923-WA0196
Published on

ಮದ್ದೂರು: ಪಟ್ಟಣದಲ್ಲಿರುವ ತಾಲ್ಲೂಕು ವ್ಯವಸಾಯೋತ್ಮನ್ನಗಳ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಆವರಣದಲ್ಲಿ ಶುಕ್ರವಾರ ನಡೆಯಿತು.


ಸಭೆಗೂ ಮುನ್ನ ಸಂಘದ ಕಚೇರಿಯ ಮುಂದೆ ಹೊಸದಾಗಿ 3.5 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸಂಘದ ನಿರ್ಮಾತೃ, ಸಂಸ್ಥಾಪಕ ಅಧ್ಯಕ್ಷರಾದ ಕೆ.ತಮ್ಮಣ್ಣಗೌಡ ರವರ ಕಂಚಿನ ಪುತ್ಥಳಿಯನ್ನು ಅವರ ಪುತ್ರರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು ಅನಾವರಣಗೊಳಿಸಿದರು. ನಂತರ ಅವರು ಮಾತನಾಡಿ, 1948ರಲ್ಲಿ ನಮ್ಮ ತಂದೆ ಕೆ.ತಮ್ಮಣ್ಣಗೌಡರು ತಾಲ್ಲೂಕಿನ ರೈತರ ಹಿತಾಸಕ್ತಿಗಾಗಿ ತಾಲ್ಲೂಕು ವ್ಯವಸಾಯೋತ್ಮನ್ನಗಳ ಸೇವಾ ಸಹಕಾರ ಸಂಘವನ್ನು ಸ್ಥಾಪಿಸಿದರು, ಅವರು ಸ್ಥಾಪಿಸಿದ ಸಂಘವು ಇಷ್ಟು ದೊಡ್ಡದಾಗಿ ಬೆಳೆದಿರುವುದು ಸಂತಸ ತಂದಿದೆ ಹಾಗೂ ಅವರ ನೆನಪಿಗಾಗಿ ಸಂಘದ ಆವರಣದಲ್ಲಿ ಅವರ ಪುತ್ಥಳಿಯನ್ನು ಸ್ಥಾಪಿಸಿರುವುದು ನನ್ನ ಹಾಗೂ ತಾಲ್ಲೂಕಿನ ರೈತರಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.


ಸಂಘದ ಅಧ್ಯಕ್ಷ ಮಹದೇವು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಘವ್, ನಿರ್ದೇಶಕರಾದ ಅಮೂಲ್ಯಾ, ಸ್ವಾಮಿ, ಚಂದ್ರನಾಯಕ್, ಶೇಖರ್, ಶಂಕರ್‌ಲಿಂಗೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಯೋಗಾನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net