ತಮ್ಮಡಿಹಳ್ಳಿ, ಬೆನಕನಕಟ್ಟೆ ಮಾರ್ಗದಲ್ಲಿ ಬಸ್​ ಬರಲಿ

02
Published on

ಹಂದನಕೆರೆ: ತುಮಕೂರು ಜಿಲ್ಲೆಯ ಗಡಿ ಭಾಗದಲ್ಲಿರುವ ಹಂದನಕೆರೆ ಹೋಬಳಿ ದಾಸಿಹಳ್ಳಿ ಗೇಟು&ತಮ್ಮಡಿಹಳ್ಳಿ&ಬೆನಕನ ಕಟ್ಟೆ&ಗುಡದಟ್ಟಿ ಮಂಚಸಂದ್ರ ಕುಪ್ಪೂರು ಮಾರ್ಗದಲ್ಲಿ ಸ್ವಾತಂತ್ರ$್ಯ ಬಂದಾಗಿ ನಿಂದಲೂ ಸಾರಿಗೆ ಸೌಲಭ್ಯವೇ ಕಂಡಿಲ್ಲ.

ದಾವಣದ ಹೊಸಳ್ಳಿ--& ಕಾಮಲಾಪುರ& ಹೊಸೂರು& ದಗ್ಗೇನಹಳ್ಳಿ& ಬರಣಾಪುರ ಮಾರ್ಗವಾಗಿ ತಮ್ಮಡಿಹಳ್ಳಿ&ಕುಪ್ಪೂರು ಮಾರ್ಗದಲ್ಲಿ ಬಸ್​ ಸೌಲಭ್ಯ ಒದಗಿಸುವಂತೆ ಸದರಿ ಭಾಗದ ಜನ, ವಿದ್ಯಾರ್ಥಿಗಳು ಸ್ಥಳಿಯ ಶಾಸಕರು, ಕೇಂದ್ರ ಮಂತ್ರಿಗಳು, ಕೆಎಸ್​ಆರ್​ಟಿಸಿ ಅಧಿಕಾರಿ ಗಳಿಗೆ ಸತತವಾಗಿ ಮನವಿ ಮಾಡುತ್ತಿದ್ದರೂ ಪ್ರಯೋಜನವೇ ಆಗಿಲ್ಲ. ನೆರೆಯ ಹಾಸನ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಹಂದನಕೆರೆ ತುಮಕೂರಿನಿಂದ ಬರೋಬ್ಬರಿ 110ಕಿಮೀ ದೂರದಲ್ಲಿದ್ದು, ಈ ಭಾಗದಲ್ಲಿ ಬಸ್​ ಸೌಲಭ್ಯ ನೀಡುವಂತೆ ಕೆಎಸ್​ಆರ್​ಟಿಸಿ ವಿಭಾಗಾಧಿಕಾರಿಗೆ ಸಾಕಷ್ಟು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬೆನಕನಕಟ್ಟೆ, ತಮ್ಮಡಿಹಳ್ಳಿ ಜನ ಚಿಕ್ಕನಾಯಕನಹಳ್ಳಿ ತಲುಪಲು 5ಕಿಮೀ ದೂರದ ಕುಪ್ಪೂರು ತಲುಪಿ ಅಲ್ಲಿಂದ ಬಸ್​ ಸೌಲಭ್ಯ ಪಡೆಯಬೇಕು, ತಿಪಟೂರು ಅಥವಾ ಹುಳಿಯಾರು ಕಡೆ ತೆರಳಲು 5ಕಿಮೀ ದೂರದ ಬರಣಾಪುರ ತಲುಪಬೇಕು, ವಿದ್ಯಾರ್ಥಿಗಳು ಶಾಲೆ, ಕಾಲೇಜು ತಲುಪಲು ನೇರವಾಗಿ ಬಸ್​ ಸೌಲಭ್ಯವಿಲ್ಲ. ತಾಲೂಕು ಕೇಂದ್ರ ಚಿಕ್ಕನಾಯಕನಹಳ್ಳಿ, ತಿಪಟೂರು ಅಥವಾ ಹುಳಿಯಾರು ತಲುಪಲು ಸಾಹಸಪಡಬೇಕಾದ ಸ್ಥಿತಿಯಿದೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಿಂದ ಬೆಂಗಳೂರಿಗೆ ಪ್ರತಿದಿನ ನೂರಾರು ಬಸ್​ಗಳು ಹುಳಿಯಾರು ಮಾರ್ಗದಲ್ಲಿ ಬೆಂಗಳೂರಿಗೆ ತೆರಳುತ್ತವೆ, ಈ ಬಸ್​ಗಳ ಪೈಕಿ ಮೂರು, ನಾಲ್ಕು ಬಸ್​ಗಳನ್ನಾದರೂ ಗವಿರಂಗಾಪುರಬೆಟ್ಟ ಮಾರ್ಗವಾಗಿ ಹಂದನಕೆರೆ, ಮತಿಟ್ಟ, ಕಾಮಲಾಪುರ, ತಮ್ಮಡಿಹಳ್ಳಿ, ಕುಪ್ಪೂರು ಮೂಲಕ ಚಿಕ್ಕನಾಯಕನಹಳ್ಳಿಗೆ ಸಂಪರ್ಕ ಕಲ್ಪಿಸಲು ಅವಕಾಶವಿದ್ದು, ಕೆಎಸ್​ಆರ್​ಟಿಸಿ ಅಧಿಕಾರಿಗಳು ಮನಸ್ಸು ಮಾಡಬೇಕಿದೆ.

ತಮ್ಮಡಿಹಳ್ಳಿ, ಬೆನಕನಕಟ್ಟೆ, ಮಂಚಸಂದ್ರ, ದಾಸಿಹಳ್ಳಿ ಗ್ರಾಮಗಳಲ್ಲಿ ಸ್ವತಂತ್ರ$್ಯ ಬಂದಾಗಿ ನಿಂದಲೂ ಸಾರಿಗೆ ಸೌಲಭ್ಯವೇ ಇಲ್ಲ, ಬಡಜನರು, ವಿದ್ಯಾರ್ಥಿಗಳು ಓಡಾಡಲು ಕನಿಷ್ಟ ಒಂದು ಬಸ್​ ಕೂಡ ಬರುವುದಿಲ್ಲ ಎಂಬುದು ನಾಗರಿಕ ಸಮಾಜದಲ್ಲಿ ಬೇಸರದ ವಿಷಯ. ಬಸ್​ ಸೌಲಭ್ಯ ಒದಗಿಸಬೇಕಾದ ಅಗತ್ಯದ ಬಗ್ಗೆ ವಿವರಿಸಿ ಬಸ್​ ಬಿಡುವಂತೆ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

|  ರಮೇಶ್​ ಗ್ರಾಪಂ ಮಾಜಿ ಅಧ್ಯಕ್ಷ, ಬೆನಕನಕಟ್ಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net