ತಮ್ಮ ಏರಿಯಾ,ಗ್ರಾಮಗಳಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಿ

CTD 19 GRILS college (3)--04
Published on


ಚಿತ್ರದುರ್ಗ: ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದೆಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಹೇಳಿದರು. ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಸಾಂಸ್ಕೃತಿಕ,ಕ್ರೀಡೆ,ರಾಷ್ಟ್ರೀಯ ಸೇ ವಾ ಯೋಜನಾ ಘಟಕ,ರೋವರ್ಸ್‌ ಮತ್ತು ರೇಂಜರ್ಸ್‌ ಹಾಗೂ ಇಕೋ ಕ್ಲಬ್‌ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು,ಕಾಂಪೌಂಡ್,ಶೌ ಚಗೃಹ ಮೊದಲಾದ ಮೂಲ ಸೌಕರ್ಯಗಳನ್ನು ಆದ್ಯತೆ ಮೇರೆಗೆ ಒದಗಿಸಲಾಗುವುದು ಎಂದರು.
ಕವಾಡಿಗರ ಹಟ್ಟಿ ಪ್ರಕರಣ ಮತ್ತೆ ಮರುಕಳಿಸಬಾರದು. ಮನೆ ಸುತ್ತ ಮುತ್ತಲಿನ ಪರಿಸರ ಸ್ವಚ್ಛತೆ ಬಗ್ಗೆ ಗಮನಹರಿಸಬೇಕು. ವಿದ್ಯಾರ್ಥಿ ಗಳು ತಮ್ಮೂರುಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು. ಸ್ವಯಂ ಸೇವಕರಾಗಿ ತಮ್ಮ ಏರಿಯಾ,ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ಕೈ ಗೊಳ್ಳಿ. ಕುದಿಸಿ ಆರಿಸಿದ ನೀರನ್ನು ಕುಡಿಯಲು ತಿಳಿಸಿ. ಪರಿಸರ ಸ್ವಚ್ಛವಾಗಿದ್ದರೆ ರೋಗ-ರುಜಿನಗಳಿಂದ ರಕ್ಷಣೆ ಸಾಧ್ಯವೆಂದರು.
ನಿರ್ದಿಷ್ಟ ಗುರಿಯೊಂದಿಗೆ ಓದಬೇಕು,ಸೇವಾ ಮನೋಭಾವ ರೂಢಿಸಿಕೊಳ್ಳಿ. ನಿಮ್ಮ ಭವಿಷ್ಯಕ್ಕಾಗಿ ತಂದೆ-ತಾಯಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುತ್ತಾರೆ. ಅವರ ಕನಸನ್ನು ನನಸು ಮಾಡುವ ಜವಾಬ್ದಾರಿ ನಿಮ್ಮದಾಗಿದೆ. ಹೆತ್ತವರ ಋಣ ತೀರಿಸಿ ಎಂದು ವಿದ್ಯಾರ್ಥಿಗಳಿ ಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ2022-23ನೇ ಶೈಕ್ಷಣಿಕ ವರ್ಷದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸೆಕೆಂಡ್‌ಪಿಯುಸಿ ವಿದ್ಯಾರ್ಥಿನಿಯರಿಗೆ ಶಾಸಕರು ನಗದು ಬಹುಮಾನ ವಿತರಿಸಿದರು. ಪ್ರಾಂಶುಪಾಲ ಎಚ್.ನಾಗರಾಜ್,ಉಪ ಪ್ರಾಂಶುಪಾಲ ಎಂ.ಕರಿಯಪ್ಪ,ಉಪನ್ಯಾಸಕ ರಾದ ಡಾ.ಶಬ್ಬೀರ್‌ಅಹಮದ್‌ಖಾನ್,ಶ್ರೀನಿವಾಸ್,ಚಂದ್ರಶೇಖರ್ ಮತ್ತಿತರರು ಇದ್ದರು.
ನಗದು ಬಹುಮಾನ ಪಡೆದ ವಿದ್ಯಾರ್ಥಿನಿಯರು
ಕಲಾವಿಭಾಗ:ಎಚ್.ಭವ್ಯ,ಎಸ್.ವರಮಹಾಲಕ್ಷ್ಮೀ,ಜಿ.ಡಿ.ರಕ್ಷಿತಾ,ಆರ್.ಕುಮುದಾ,ಎಸ್.ಕೀರ್ತಿಬಾಯಿ,ಪಿ.ಎಚ್.ರಕ್ಷತಾ,ಆರ್. ವಿದ್ಯಾ,ಎನ್.ಕೀರ್ತಿ,ಕೆ.ಕವನ.
ವಿಜ್ಞಾನ ವಿಭಾಗ: ಪ್ರವಲಿಕ.ಯು.ಚಿನ್ಮಯಿ,ಸಿ.ಎಂ.ಅಮೃತ,ಎಸ್.ಶ್ರೀವತ್ಸಲಾ,ಟಿ.ಸಿ.ತೇಜಶ್ರೀ,ಪಿ.ಡಿ.ಅರ್ಚನಾ,ಲಾವಣ್ಯ,ರಚನಾ, ಸಾನಿಯಾ.
ವಾಣಿಜ್ಯವಿಭಾಗ:ಶಿವಶ್ರೀ,ಕೆ.ಎಸ್.ಚಿತ್ರಾ,ಎಸ್.ವೈ.ಪೂಜಾಶ್ರೀ,ಆರ್.ಗೀತಾಂಜಲಿ,ಜ್ಯೋತಿಚಿದಾನಂದ,ಆರ್.ಕೀರ್ತನಾ,ಎಲ್.ಯ ಶಸ್ವಿನಿ,ಎಚ್.ಸುಪ್ರಿತಾ,ಆರ್.ಸ್ಫೂರ್ತಿ,ಪಿ.ಮೇಘನಾ,ಟಿ.ಸಂಗೀತಾ.

(ಸಿಟಿಡಿ 19 ಗರ್ಲ್ಸ್ ಕಾಲೇಜು)
ಚಿತ್ರದುರ್ಗ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಸಾಂಸ್ಕೃತಿಕ,ಕ್ರೀಡೆ,ರಾಷ್ಟ್ರೀಯ ಸೇವಾ ಯೋಜನಾ ಘಟಕ,ರೋವರ್ಸ್‌ ಮತ್ತು ರೇಂಜರ್ಸ್‌ ಹಾಗೂ ಇಕೋ ಕ್ಲಬ್‌ಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯ ರಿಗೆ ನಗದು ಬಹುಮಾನ ವಿತರಿಸಿದರು. ಪ್ರಾಂಶುಪಾಲ ಎಚ್.ನಾಗರಾಜ್,ಉಪ ಪ್ರಾಂಶುಪಾಲ ಎಂ.ಕರಿಯಪ್ಪ,ಉಪನ್ಯಾಸಕರಾದ ಡಾ.ಶಬ್ಬೀರ್‌ಅಹಮದ್‌ಖಾನ್,ಶ್ರೀನಿವಾಸ್,ಚಂದ್ರಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net