ತಮಿಳುನಾಡಿಗೆ ಕಾವೇರಿ ನೀರು ವಿರೋಧಿಸಿ ಪ್ರತಿಭಟನೆ

CTD 26 VIJYAYASENE--04
Published on


ಚಿತ್ರದುರ್ಗ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಜಿಪಂದಲ್ಲಿರುವ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರ ಕಚೇರಿ ಬಳಿ ಮಂಗಳವಾರ ಕರುನಾಡ ವಿಜಯಸೇನೆ ಸದಸ್ಯರು ಪ್ರತಿಭಟಿಸಿದರು.
ಜಲಾಶಯಗಳು ಬರಿದಾಗುತ್ತಿದ್ದರೂ ರಾಜ್ಯದ ಸಂಸದರು ಮೌನ ವಹಿಸಿದ್ದಾರೆ. ರಾಜ್ಯಸರ್ಕಾರ ರೈತರ ಹಿತ ಕಡೆಗಣಿಸಿದೆ. ಬೆಂಗಳೂ ರು ಬಂದ್‌ನಲ್ಲಿ ಪಾಲ್ಗೊಂಡಿರುವ ಪ್ರತಿಭಟನಾನಿರತರ ಬಂಧನ ಖಂಡನೀಯ. ಕರ್ನಾಟಕ ಬರಗಾಲಕ್ಕೆ ತುತ್ತಾಗಿದ್ದು ಯಾವುದೇ ಕಾರಣ ಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ಸಮಸ್ಯೆ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸ ಬೇಕೆಂದು ಆಗ್ರಹಿಸಿದರು.
ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್,ವೀಣಾಗೌರಣ್ಣ,ರತ್ನಮ್ಮ,ಜಗದೀಶ್,ಅಖಿಲೇಶ್,ಮಹಮದ್‌ರಫಿ,ಆರ್.ಪ್ರದೀಪ್,ಅವಿನಾಶ್, ಅಭಿಷೇಕ್,ಕೋಟೇಶ್,ವಿಶ್ವನಾರಾಯಣಮೂರ್ತಿ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net