ತಮಿಳುನಾಡಿಗೆ ಕಾವೇರಿ ನೀರು ವಿರೋಧಿಸಿ ಕರವೇ ಪ್ರತಿಭಟನೆ

CTD 15 KARAVE--03
Published on


ಚಿತ್ರದುರ್ಗ: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ರಾಜ್ಯಸರ್ಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ‌್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟಿಸಿದರು. ನಗರದ ಸಂತೇಪೇಟೆಯಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ‌್ಯಕರ್ತರು,ನಮ್ಮ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಡಿಯುವ ನೀರಿಗೂ ತತ್ವಾರ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರಾಜ್ಯದ ಎಲ್ಲ ಸಂಸದರೂ ಹೊಸದಿಲ್ಲಿಯಲ್ಲಿ ಪ್ರತಿಭಟಿಸಿ,ಕೇಂದ್ರ ಸರ್ಕಾ ರದ ಮೇಲೆ ಒತ್ತಡ ಹೇರಬೇಕು.ರಾಜ್ಯದ ಜಲ-ನೆಲದ ರಕ್ಷಣೆಗಾಗಿ ರಾಜೀನಾಮೆ ನೀಡ ಬೇಕೆಂದು ಸಂಸದರನ್ನು ಒತ್ತಾಯಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಟಿ.ರಮೇಶ್,ಜಿ.ರಾಜಪ್ಪ,ಎಲ್.ಎಂ.ವಿಜಯಕುಮಾರ್,ಪಿ.ರಮೇಶ್,ಎಸ್.ಬಿ.ಗಣೇಶ್,ಟಿ.ಕೆ.ಶಿವಮೂರ್ತಿ,ಬಿ ವೆಂಕಟೇಶ್,ಆರ್.ಜಿ.ಲಕ್ಷಣ,ಎಂಕೆ ಹಟ್ಟಿ ರಮೇಶ್,ವಸಂತ,ಮಲ್ಲಪುಸಾದ್,ಬಾಬುಹಳಿಯೂರ್,ಚಂದ್ರಕಲಾ,ಸಿ.ಅಶ್ವಥ್,ವೆಂಕಟೇಶ್,ಸ್ವ ಪ್ನ,ರಾಮಕೃಷ್ಣಪ್ಪ,ಗೋ.ಬಸವರಾಜು,ದಾದಾಪೀರ್,ಜಾಕೀರ್,ಮನು,ನೀಲಕಂಠ,ಮಂಜುಳಾ,ಸುಮಾ,ಜ್ಯೋತಿ,ಎಂ.ಕೆ.ಹಟ್ಟಿ ಮಾರುತಿ, ರುದ್ರೇಶ್,ಕಾರ್ತಿಕ್,ರವಿ,ಜಯಪ್ಪ,ರವೀಶ್,ಸಂದೀಪ,ಲೋಕೇಶ್,ಉಮೇಶ್,ಲಕ್ಷ್ಮಣ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net