ತಮಿಳನಾಡಿಗೆ ೫ ಚಿನ್ನ, ೪ ಕಂಚು, ೨ ಬೆಳ್ಳಿ ಪದಕ..!

bkt-11-7 (1)
Published on

ಬಾಗಲಕೋಟೆ: ರಾಜ್ಯ ವುಶು ಸಂಸ್ಥೆ ಹಾಗೂ ರಾಷ್ಟ್ರೀಯ ವುಶು ಸಂಸ್ಥೆದಿಂದ ಪ್ರಥಮ ಬಾರಿಗೆ ಕೋಟೆನಗರಿಯಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನಗಳ ದಕ್ಷಿಣ ಭಾರತದ ಖೇಲೋ ಇಂಡಿಯಾ ಸಬ್ ಜ್ಯೂನಿಯರ, ಜ್ಯೂನಿಯರ್ ಮತ್ತು ಸಿನಿಯರ ಮಹಿಳಾ ಕ್ರೀಡಾಕೂಟವು ಕ್ರೀಡಾ ಆಸಕ್ತರಿಗೆ ಹಬ್ಬದ ವಾತಾವರಣ ಸೃಷ್ಠಿ ಮಾಡಿದೆ.

ಮುಳಗಡೆ ನಗರಿ ಬಾಗಲಕೋಟೆ ನಗರದ ಬಿವಿವಿ ಸಂಘದ ಗೌರಿಶಂಕರ ಕಲ್ಯಾಣ ಮಂಟಪದ ಆವರಣದಲ್ಲಿ ನಡೆಯುತ್ತಿರುವ ವುಶು ಕ್ರೀಡೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಸೋಮವಾರ, ಮಂಗಳವಾರ ನಡೆದ ಕ್ರೀಡಾಕೂಟದಲ್ಲಿ ವಿವಿಧ ರಾಜ್ಯದ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.

ದಕ್ಷಿಣ ಭಾರತದ ಖೇಲೋ ಇಂಡಿಯಾ ಸಬ್ ಜ್ಯೂನಿಯರ ವಿಭಾಗದಲ್ಲಿ ತಮಿಳನಾಡಿಗೆ ೫ ಚಿನ್ನ, ೪ ಕಂಚು, ೨ ಬೆಳ್ಳಿ ಪದಕ ಪಡೆದು ತನ್ನಮುನ್ನಡೆಯನ್ನು ಸಾಽಸಿದೆ. ಕೇರಳ ೩ ಬೆಳ್ಳಿ ೨ ಚಿನ್ನದ ಪದಕ ಪಡೆದು ದ್ವೀತಿಯ ಸ್ಥಾನದಲ್ಲಿ ಮುಂದುವರೆದಿದೆ. ಇನ್ನು ಕರ್ನಾಟಕ ೧ ಬೆಳ್ಳಿ ೩ ಕಂಚು ಪದಕ ಪಡೆದು ತೃತೀಯ ಸ್ಥಾನದಲ್ಲಿ ಸಾಧನೆ ಮುಂದುವರೆಸಿದ್ದು, ತೆಲಂಗಾಣ ೫ ಕಂಚು ಪದಗಳ ಮುನ್ನಡೆ ಕಾಯ್ದಕೊಂಡಿದೆ.ವುಶು ಕ್ರೀಡಾಕೂಟ ಕ್ರೀಡಾ ಪ್ರೇಮಿಗಳನ್ನು ರೋಮಾಂಚನಗೋಳಿಸಿದೆ.

ವಿವಿಧ ವಿಭಾಗಗಳಲ್ಲಿ -Àಲಿತಾಂಶ:
ಚಾಂಗ್ ಕ್ವಾನ್ ವಿಭಾಗದಲ್ಲಿ: ತಮಿಳನಾಡಿನ ಗೋಕುಲವರ್ಷಿಣಿ ಚಿನ್ನದ ಪದಕ, ಕೆರಳ ದೀಯಾರೀಜು ಬೆಳ್ಳಿ ಪದಕ ಪಡೆದರೆ, ತೆಲಂಗಾಣದ ಜಿ.ವೈಷ್ಣವಿ ಹಾಗೂ ತಮಿಳುನಾಡಿನ ಎಂ.ಕಲಂದಿಯಾ ಇಲಾಸರೆ ಕಂಚು ಪದಕ ಪಡೆದು ವಿಜಯಶಾಲಿಗಳಾಗಿz್ದÁರೆ.

ಜಿಯಾನ್ಯು ವಿಭಾಗ: ಚಿನ್ನದ ಪದಕವನ್ನು ಕೆರಳದ ನೈನಾ ನೌಪಾಲ, ಬೆಳ್ಳಿ ಪದಕವನ್ನು ತಮಿಳುನಾಡಿನ ಎಸ್.ರಶ್ಮೀ, ಇನ್ನು ಕಂಚು ಪದಕವನ್ನು ಕೆರಳದ ನಯನಿಕಾ ಹಾಗೂ ತೆಲಂಗಾಣದ ಮಕಾಂಕ್ಷಾ ಯಾಧವÀ ಪಡೆದಿz್ದÁರೆ.
ತೈಜಿಕ್ವಾನ್ ವಿಭಾಗ: ತಮಿಳನಾಡಿನ ಪ್ರಕಾಲ್ಯ ಕೆ.ಎಸ್. ಚಿನ್ನದ ಪದಕ, ಕೆರಳದ ರೀತಿಕಾ ಎಂ, ತಮಿಳನಾಡಿನ ಅಭಿರಾಮಿ ಕೆ ಹಾಗೂ ಕರ್ನಾಟಕದ ಸ್ಪೂರ್ತಿ ಗೌಡರ ಕಂಚು ಪದಕ ಪಡೆದಿz್ದÁರೆ.

ತೈಜಿಜಿಯಾನ ವಿಭಾಗ: ತಮಿಳನಾಡಿನ ಕೆ,ಯಜನಿ ಚಿನ್ನದ ಪದಕ ಪಡೆದರೆ ಎಸ್. ರಹಿತಾ ಬೆಳ್ಳಿ ಪದಕ ಪಡೆದರು. ಇನ್ನು ತೆಲಂಗಾಣದ ಗೋಪಾರಜುಲಾ ಹಾಗೂ ಕರ್ನಾಟಕದ ಜೈಷ್ಣಾ ಶ್ರೀ.ಬಿ ತಲಾ ಒಂದು ಕಂಚಿನ ಪದಕ ಪಡೆದರು.

ಚಾಂಗ್ವಾನ್ ವಿಭಾಗ: ಚಿನ್ನದ ಪದಕವನ್ನು ತಮಿಳನಾಡಿನ ಎ.ಪ.ಲಹಿಜಾ¨ಲ್ ಪಡೆದರೆ. ಬೆಳ್ಳಿ ಪದಕವನ್ನು ಕೇರಳದ ನೋಯಾ ಜುನೈದ ಪಡೆದರು. ಇನ್ನು ತಮಿಳನಾಡಿನ ಗಂಗಾವರ್ಷಿನ ಜಿ ಹಾಗೂ ತೆಲಂಗಾಣ ಜರುಪುಲಾ ಚಂದನ ತಲಾ ಒಂದು ಕಂಚು ಪದಕ ಬಾಚಿಕೊಂಡಿದ್ದಾರೆ.

ಜಿಹಾನ್ಸು ವಿಭಾಗ: ಕೇರಳದ ಅನ್ನಮರೀಯಾ ರ‍್ಕೀಸ್ ಚಿನ್ನದ ಪದಕ, ತೆಲಂಗಾಣದ ರವೂಲಾಮೋಕ್ಷಾ ಬೆಳ್ಳಿ ಪದಕ, ಕರ್ನಾಟಕದ ಅನ್ನಪೂರ್ಣೆಶ್ವರಿ ಆರಾಧ್ಯಮಠ ಹಾಗೂ ತಮಿಳನಾಡಿನ ಜೆ.ಎಲ್.ಶೋಷ್ಣಾ ತಲಾ ಒಂದು ಕಂಚು ಪದಕ ಪಡೆದ್ದಿz್ದÁರೆ. ಕಿಯಾಂಗ್ಸು ವಿಭಾಗದಲ್ಲಿ ಚಿನ್ನದ ಪದಕವನ್ನು ತಮಿಳನಾಡಿನ ರೀಯಾನ್ಸಕಾ ಆರ್.ಬೆಳ್ಳಿ ಪದಕವನ್ನು ಕರ್ನಾಟಕದ ಶೃತಿ ಸುಲಾಖೆ, ಕೆರಳದ ವೈಗಾ ಜಿ.ಎಸ್ ಹಾಗೂ ತಮಿಳುನಾಡಿನ ಆರ್.ನೇಹಾ ಮರೀನ ತಲಾ ಒಂದು ಕಂಚು ಪದಕ ಪಡೆದಿz್ದÁರೆ.

ನಂಕ್ವಾನ ವಿಭಾಗದಲ್ಲಿ ತಮಿಳನಾಡಿನ ಪಿ.ಅಭಿರುತಾ ಚಿನ್ನದ ಪದಕ ಪಡೆದರೆ, ಕೇರಳದ ಹೈಜಾ ಪಾತೀಮಾ ಎಂ.ಪಿ ಬೆಳ್ಳಿ ಪದಕ ಪಡೆದರು. ಇನ್ನು ಓಡಿಸ್ಸಾದ ಆರ್.ಪದ್ಮಾ ಹಾಗೂ ಕರ್ನಾಟಕದ ಶ್ರೀಶ್ವಾನ್ವಿ ತಲಾ ಒಂದು ಕಂಚು ಪದಕ ಪಡೆದರು.

೪ ದಿನಗಳ ದಕ್ಷಿಣ ಭಾರತ ರಾಜ್ಯಗಳ ಮಹಿಳಾ ವುಶು ಕ್ರೀಡಾಕೂಟದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳನಾಡು, ಪಾಂಡಿಚೇರಿ, ಓಡಿಸ್ಸಾ, ಗೋವಾ, ಅಂಡಮಾನ್ ಮತ್ತು ನಿಕೋಬಾರ, ಲಕ್ಷದ್ವೀಪ ಸೇರಿದಂತೆ ೧೦ ರಾಜ್ಯಗಳ ೫೦೦ ಕ್ರೀಡಾಪಟುಗಳು ಪಾಲ್ಗೊಂಡಿz್ದÁರೆ. ಇನ್ನು ಎರಡು ದಿನಗಳ ಕಾಲ ವಿವಿಧ ವಿಭಾಗಗಳು ವುಶು ಕ್ರೀಡಾಕೂಟ ಜರುಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net