

ತೇರದಾಳ: ಸಮೀಪದ ತಮದಡ್ಡಿ ಗ್ರಾಮ ಪಂಚಾಯಿತಿ 2ನೇ ಅವಧಿಗೆ ಅಧ್ಯಕ್ಷರಾಗಿ ಭೀಮಪ್ಪ ಕೊಣ್ಣೂರ, ಉಪಾಧ್ಯಕ್ಷರಾಗಿ ಚಂದ್ರಕಾಂತ ಅಕ್ಕಿವಾಟ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು ಎಂಟು ಸದಸ್ಯರನ್ನೊಳಗೊಂಡ ಪಂಚಾಯಿತಿಗೆ ಗುರುವಾರ ಚುನಾವಣೆ ನಡೆಯಿತು. ಎರಡು ಸ್ಥಾನಗಳಿಗೆ ಸಾಮಾನ್ಯ ಮೀಸಲಾತಿ ಇದ್ದು, ನಾಲ್ಕು ನಾಮಪತ್ರ ಸಲ್ಲಿಕೆಯಾಗಿದ್ದವು. ಇಬ್ಬರು ನಾಮಪತ್ರ ಹಿಂಪಡೆದುಕೊಂಡಿದ್ದರಿಂದ ಭೀಮಪ್ಪ ಕೊಣ್ಣೂರ ಅಧ್ಯಕ್ಷರಾಗಿ, ಚಂದ್ರಕಾಂತ ಅಕ್ಕಿವಾಟ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.
ಪಿಎಸ್‌ಐ ಅಪ್ಪು ಐಗಳಿ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪಿಡಿಒ ಪ್ರಕಾಶ ಕನ್ನೊಳ್ಳಿ, ಕಾರ್ಯದರ್ಶಿ ರಾಜೇಸಾಬ ನದಾಫ್, ಸಿಬ್ಬಂದಿ ಅನೀಲ ಶಿರಗಾರ, ಮುತ್ತಪ್ಪ ವ್ಯಾಪಾರಿ ಚುನಾವಣೆ ಪ್ರಕ್ರಿಯೆಗೆ ನೆರವಾದರು.
ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಶಾಸಕ ಸಿದ್ದು ಸವದಿ, ಸುರೇಶ ಅಕ್ಕಿವಾಟ, ಲಕ್ಕಪ್ಪ ಪಾಟೀಲ ಇತರರಿದ್ದರು.