ತಪ್ಪುದಾರಿ ಹಿಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ

CTD 26 KANUNU--06
Published on


ಚಿತ್ರದುರ್ಗ: ಜ್ಞಾನಾರ್ಜನೆ ಕಡೆಗೆ ಮಾತ್ರ ತಮ್ಮ ಗಮನವಿರಲಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ‌್ಯದರ್ಶಿ,ನ್ಯಾಯಾಧೀಶ ಎಂ.ವಿಜಯ್ ಹ ದಿಹರೆಯದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,ವಕೀಲರ ಸಂಘ ಹಾಗೂ ಪದವಿಪೂರ್ವ ಶಿಕ್ಷಣ ಇ ಲಾಖೆ ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಪೋಕ್ಸೊ ಕಾಯ್ದೆ ಮತ್ತು ಮಕ್ಕಳ ಹಕ್ಕುಗಳ ಕಾನೂನು ಅರಿವು-ನೆರವು ಕಾರ‌್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಓದು ಹೊರತುಪಡಿಸಿ ಅನ್ಯಆಕರ್ಷಣೆ,ಆಸೆ-ಆಮಿಷಗಳಿಗೆ ವಿದ್ಯಾರ್ಥಿಗಳು ಒಳಗಾಗಬಾರದು. ಉತ್ತಮ ಶಿಕ್ಷಣ ಪಡೆದು ತಂದೆ-ತಾಯಿ, ಸಮಾಜಕ್ಕೆ ಕೀರ್ತಿ ತರುವ ಮೂಲಕ ಸ್ವಾಸ್ಥ್ಯಜೀವನ ನಡೆಸಬೇಕು. ಹದಿಹರೆಯದ ವಿದ್ಯಾರ್ಥಿಗಳಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆ ಸಹಜ. ಈ ವಯಸ್ಸಿನಲ್ಲಿ ತಪ್ಪು ದಾರಿ ಹಿಡಿದರೆ ಪೊಲೀಸ್‌ಠಾಣೆ,ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ಮಕ್ಕಳಲ್ಲಿ ಕಾನೂನು ಅರಿವಿಗೆ ಮುಂದಾಗಿದೆ ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ರಾಜು ಮಾತನಾಡಿ,ಪಠ್ಯ,ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನದ್ದಾಗಿ ತೊಡಗಿಸಿಕೊಳ್ಳ ಬೇಕು. ಯಾವುದೇ ಕಾರಣಕ್ಕೂ ತಂದೆ-ತಾಯಿಗಳ ವಿಶ್ವಾಸಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿ ದರು.

ವಕೀಲ ಡಿ.ಎಂ.ಬಸವರಾಜ ಉಪನ್ಯಾಸ ನೀಡಿದರು. ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್,ಕಾರ‌್ಯದರ್ಶಿ ಆರ್.ಗಂಗಾಧರ್,ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಬಿ.ಕೃಷ್ಣಪ್ಪ,ಉಪನ್ಯಾಸಕರಾದ ಡಾ.ಬಿ.ಎಂ.ಗುರುನಾಥ್, ಡಾ.ಎಸ್. ಎನ್.ಹೇಮಂತರಾಜು,ಕೆ.ರೇಣುಕಾ,ಆರ್.ಚಂದ್ರಕಲಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net