ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶ ದೊರೆತಾಗ ಸದುಪಯೋಗ ಪಡೆದುಕೊಳ್ಳಬೇಕು: ಸಿಇಒ ಕಾಂತರಾಜು

ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶ ದೊರೆತಾಗ ಸದುಪಯೋಗ ಪಡೆದುಕೊಳ್ಳಬೇಕು: ಸಿಇಒ ಕಾಂತರಾಜು
Published on

ಹಾಸನ : ಹುಟ್ಟು ಉಚಿತ ಸಾವು ಖಚಿತ. ಈ ಎರಡರ ನಡುವೆ ನಾವು ಏನಾದರೂ ಸಾಧನೆ ಮಾಡಬೇಕು. ಈಗಾಗಲೇ ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶ ದೊರೆತಿದೆ ಅದನ್ನು ಸದುಪಯೋಗ ಪಡೆದುಕೊಳ್ಳಬೇಕು ಇದು ನಿಮ್ಮ ಕರ್ತವ್ಯ ಎಂದು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕಾಂತರಾಜು ಕಾರಗೃಹ ಬಂದಿಗಳಿಗೆ ಕಿವಿಮಾತು ಹೇಳಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಭಾನುವಾರ ಕಾರಾಗೃಹ ಸುಧಾರಣಾ ಸೇವೆ ಇಲಾಖೆ ಮತ್ತು ಲೋಕ ಶಿಕ್ಷಣ ನಿರ್ದೇಶನಾಲಯ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕಾರಾಗೃಹದ ಅನಕ್ಷರಸ್ಥ ಬಂದಿಗಳಿಗೆ 2022-23ನೇ ಸಾಲಿನ ’ಕಲಿಕೆಯಿಂದ ಬದಲಾವಣೆ’ ಪೀಠಿಕೆಯೊಂದಿಗೆ ನಡೆದ ಸಾಕ್ಷರತಾ ಉದ್ಘಾಟನಾ ಸಮಾರಂಭ ಉದ್ಘಾಡಿಸಿ ಮಾತನಾಡಿದರು.

ಶಾಲೆಗೆ ಹೋಗದ ವಿದ್ಯಾರ್ಥಿಗಳಿಗೆ ಸಾಕ್ಷರತಾ ಇಲಾಖೆ ವತಿಯಿಂದ ವಿದ್ಯಾಭ್ಯಾಸಕ್ಕೆ ಅವಕಾಶವಿದೆ . ಅನಕ್ಷರಸ್ಥರಾದ ಬಂದಿಗಳಿಗೆ, ಪೌರ ಕಾರ್ಮಿಕರಿಗೆ , ವೃದ್ಧರಿಗೆ ಶಿಕ್ಷಣ ಒದಗಿಸಿ ಉತ್ತಮ ದೇಶವನ್ನು ಕಟ್ಟಬೇಕು ಎಂಬುದು ಇದರ ಆಶಯ. ನಾವು ಸಂಘ ಜೀವಿಗಳು ನಮ್ಮ ಹೋರಾಟ ಜನರ ಒಳಿತಿಗಾಗಿ ಹಾಗೂ ಕುಟುಂಬದ ಒಳಿತಿಗಾಗಿ ಇರಬೇಕೇ ಹೊರತು ಸ್ವಾರ್ಥತನಕಾಗಲ್ಲ ಎಂದರು.

ಶಿಕ್ಷಣ ಜ್ಞಾನವಿಲ್ಲದೆಯೋ ಅಥವಾ ಕೊಪಕ್ಕೆ ಬುದ್ದಿಕೊಟ್ಟು ನೀವೆಲ್ಲರೂ ತಪ್ಪನ್ನು ಮಾಡಿದ್ದೀರಾ ಅದನ್ನು ಈ ಮೂಲಕ ತಿಳಿದುಕೊಂಡು ಸಮಾಜಕ್ಕೆ ಒಳ್ಳೆಯ ಸತ್ಪ್ರಜೆಗಳಾಗಿ ಬಾಳಬೇಕು ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವ ಪ್ರಾಧಿಕರ ಸದಸ್ಯ ಕಾರ್ಯದರ್ಶಿ ಬಿ.ಕೆ ರವಿಕಾಂತ್ ಮಾತನಾಡಿ, ಅನಕ್ಷರತೆ ಹೆಚ್ಚಾದಾಗ ತಪ್ಪುಗಳು ಹೆಚ್ಚಾಗುತ್ತವೆ ಆದ್ದರಿಂದ ಎಲ್ಲಾ ಬಂದಿಗಳು ಯಶಸ್ವಿಯಾಗಿ ಮಾಡಬೇಕಾದ ಮುಖ್ಯ ಕೆಲಸ ಎಂದರೆ ಶಿಕ್ಷಣದ ಮಹತ್ವವನ್ನು ಅರಿತು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಹೇಳಿದರು.

ಕರ್ನಾಟಕದಲ್ಲಿ ಸಾಕ್ಷರತಾ ಪ್ರಮಾಣ ಅರ್ಧಕ್ಕೆ ಅರ್ಧಆಗಿದ್ದು ಶೇ.50 ರಷ್ಟು ಅನಕ್ಷರಸ್ಥರು ಇದ್ದಾರೆ ಆದ್ದರಿಂದ ಮೊದಲು ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ಎಂದರು.

ಕಾನೂನುಗಳನ್ನು ಅರಿಯದೆ ತಪ್ಪುಗಳು ಹೆಚ್ಚಾಗುತ್ತಿವೆ ಹೊರತು ಕಡಿಮೆಯಾಗುತ್ತಿಲ್ಲ ನಾವು ಅಕ್ಷರಸ್ಥರಾದಾಗ ತಪ್ಪುಗಳನ್ನು ತಿದ್ದಿಕೊಳ್ಳುವ ಬುದ್ಧಿ ಹೆಚ್ಚಾಗಿ ನಮ್ಮಲಿನ ದುಷ್ಟತನ ಬಲಹೀನತೆ ಪಡೆದುಕೊಳ್ಳುತ್ತದೆ . ಹಿಂದಿ ನಮ್ಮ ಸ್ವತಂತ್ರಕ್ಕಾಗಿ ಹೋರಾಟ ನಡೆಸಿದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಗಳು ಕೂಡ ಕಾರಾಗೃಹ ಹೋಗಿದ್ದಾರೆ. ಆದರೆ ಅವರು ಅಲ್ಲಿ ಉತ್ತಮ ಗುಣಗಳನ್ನು ಅಳವಡಿಸಿಕೊಂಡು ನಾಡಿಗೆ ಕೀರ್ತಿಯನ್ನು ನೀಡಿದರು .

ಮಹಾತ್ಮ ಗಾಂಧೀಜಿಯವರು ಕಾರಾಗೃಹದಲ್ಲಿ ’ದಿ ಎಕ್ಸ್ಪೀರಿಯನ್ಸ್ ವಿತ್ ಟ್ರುಥ್ ’ಎಂಬ ಪುಸ್ತಕ ಬರೆದು ಜಗತ್ತಿಗೆ ತಪ್ಪು ಮಾಡುವುದು ಸಹಜ ಅದನ್ನು ತಿದ್ದುಕೊಳ್ಳುವುದು ನಮ್ಮ ಒಳ್ಳೆಯ ಗುಣ ಎಂದು ಸಂದೇಶ ನೀಡಿದ್ದಾರೆ. ಅದೇ ರೀತಿ ನಾವು ಕೂಡ ನಮ್ಮ ಒಳ್ಳೆಯ ಜೀವನ ಚರಿತ್ರೆಯನ್ನು ಹೊಂದಲು ಅವರ ಈ ಗುಣವನ್ನು ಅಳವಡಿಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದ ಅವರು ಬದಲಾಗಿ ಎಂದರು.

ಜಿಲ್ಲಾ ವಯಸ್ಕ ಶಿಕ್ಷಣ ಅಧಿಕಾರಿ ಕಾಂತರಾಜು ಪ್ರಾಸ್ಥಾವಿಕ ನುಡಿಗಳನ್ನಾಡಿ, ಅನಕ್ಷರತೆ ಭಾರತ ದೇಶಕ್ಕೆ ಒಂದು ಶಾಪ ಹಾಗಾಗಿ ವಿದ್ಯಾವಂತರಾಗಿ ದೇಶಕ್ಕೆ ಕೊಡುಗೆ ನೀಡಬೇಕು ಕರ್ನಾಟಕ ಸರ್ಕಾರ ಅಕ್ಷರಸ್ಥರನ್ನಾಗಿ ಮಾಡಲು ಚಿತ ಶಿಕ್ಷಣದ ಅವಕಾಶ ಮಾಡಿಕೊಟ್ಟಿದ್ದೆ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ಅನಕ್ಷರಸ್ಥ ಬಂದಿಗಳಿಗೆ ಸಾಕ್ಷರತ ಕಾರ್ಯಕ್ರಮದಿಂದ ಶಿಕ್ಷಣ ಪಡೆಯಲು ನೋಟ್ ಬುಕ್ ಹಾಗೂ ಪೆನ್ ವಿತರಿಸಲಾಯಿತು.

ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಕಾರಗೃಹದ ಅಧೀಕ್ಷಕ ಬಿ.ಸುರೇಶ್, ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಸ್ ಪಾಷ , ಸಿಬ್ಬಂಧಿಗಳು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net