ತಪ್ಪು ತಿದ್ದಿಕೊಳ್ಳಲು ಪ್ರೇರೇಪಣೆ

KDR valmioki
ಕಡೂರು ತಾಪಂನಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ವಾಲ್ಮೀಕಿ ಸಮಾಜದ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು. ಶಾಸಕ ಕೆ.ಎಸ್.ಆನಂದ್, ಭಂಡಾರಿ ಶ್ರೀನಿವಾಸ್, ಕಲ್ಲೇಶ್, ಪೂರ್ಣಿಮಾ, ಭಾಗ್ಯಲಕ್ಷ್ಮೀ, ಪ್ರವೀಣ್, ಚಂದ್ರಮೌಳಿ, ರಮೇಶ್ ಇತರರಿದ್ದರು.
Published on

ಕಡೂರು: ಪ್ರತಿಯೊಬ್ಬರೂ ತಪ್ಪುಗಳನ್ನು ತಿದ್ದಿಕೊಂಡು ಬದಲಾವಣೆಯಿಂದ ಸಮಾಜದಲ್ಲಿ ಬದುಕಲು ಪ್ರೇರೇಪಿಸುವ ರಾಮಾಯಾಣ ಮಹಾನ್ ಕಾವ್ಯವನ್ನು ಮಹರ್ಷಿ ವಾಲ್ಮೀಕಿ ಜಗತ್ತಿಗೆ ಪರಿಚಯಿಸಿಕೊಟ್ಟಿದ್ದಾರೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ತಾಪಂನಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ರಾಮಾಯಣದಲ್ಲಿ ಉಲ್ಲೇಖಿಸಿರುವ ಅಂಶಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಕಾವ್ಯದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪವಾಗಿವೆ. ವಿದ್ಯೆ ಯಾರೊಬ್ಬರ ಸ್ವತ್ತಲ್ಲ, ಸಾಧಕನ ಸ್ವತ್ತು ಆಗುತ್ತದೆ. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ಶೋಷಿತ ಸಮಾಜದ ಬೆಳವಣಿಗೆಗೆ ಶಿಕ್ಷಣದ ಪಾತ್ರ ಅತಿಮುಖ್ಯವಾಗಲಿದೆ ಎಂದರು.

ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯ ವಾಸಿಸುತ್ತಿರುವ ಗ್ರಾಮಗಳ ಅಭಿವೃದ್ಧಿಗೆ ಒತ್ತುಕೊಡಲಾಗಿದೆ. ಬೇಡಿಕೆಗೆ ಅನುಗುಣವಾಗಿ ಸಮುದಾಯಭವನಗಳ ನಿರ್ಮಾಣಕ್ಕೆ ಅನುದಾನ, ದೇವಾಲಯ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸಿಕೊಡಲಾಗಿದೆ. ಸಮಾಜದ ಬೇಡಿಕೆಯಂತೆ ತಾಲೂಕಿನಲ್ಲಿ ಸಮಾಜಕ್ಕಾಗಿ ಎರಡು ಎಕರೆ ಜಾಗ ತಾಲೂಕು ಸಂಘ ಗುರುತಿಸಿಕೊಟ್ಟರೆ ಅಗತ್ಯ ಕ್ರಮಗಳನ್ನು ವಹಿಸಲಾಗುತ್ತದೆ. ವಾಲ್ಮೀಕಿ ಸಮಾಜದ ಬೆಳವಣಿಗೆಗೆ ನನ್ನ ಪ್ರೋತ್ಸಾಹ ನಿರಂತರವಾಗಿರಲಿದೆ ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ವಾಲ್ಮೀಕಿ ರಾಮಾಯಣ ಮೊದಲ ಮಹಾಕಾವ್ಯ. ಹಿಂದು ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೃತಿ. ರಾಮಾಯಣ ಮಹಾಕಾವ್ಯದಲ್ಲಿ ಪಿತೃ ವಾತ್ಸಲ್ಯ, ಸೋದರ ವಾತ್ಸಲ್ಯ, ಸತ್ಯ ಶೋಧನೆ, ಧರ್ಮಪರಿಪಾಲನೆ, ಪಿತೃವಾಕ್ಯ ಪರಿಪಾಲನೆಯಂಥ ಮಹತ್ವದ ವಿಚಾರಗಳನ್ನು ಆದಿಕವಿ ವಾಲ್ಮೀಕಿ ಕೃತಿ ಮೂಲಕ ಕಟ್ಟಿಕೊಟ್ಟಿದ್ದಾರೆ. ಅವುಗಳನ್ನು ನಾವೆಲ್ಲರೂ ಪರಿಪಾಲನೆ ಮಾಡಬೇಕಿದೆ. ಬೇಟೆಗಾರ, ಅಜ್ಞಾನಿ, ಅವಿದ್ಯಾವಂತನಾಗಿದ್ದ ವಾಲ್ಮೀಕಿ ನಾರದ ಮುನಿಗಳ ಮಾರ್ಗದರ್ಶನದಲ್ಲಿ ಮಹಾತಪಸ್ವಿಯಾಗಿ ಬದಲಾವಣೆ ಮೂಲಕ ಜಗತ್ತಿಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ಹೇಳಿದರು.

ವಾಲ್ಮೀಕಿ ಸಮುದಾಯದ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು. ಸಮಾಜಕ್ಕಾಗಿ ಎರಡು ಎಕರೆ ಜಾಗ ಮಂಜೂರು ಮಾಡಿಕೊಡುವಂತೆ, ಪಟ್ಟಣದ ಮುಖ್ಯರಸ್ತೆಗೆ ವಾಲ್ಮೀಕಿ ಎಂದು ನಾಮಕರಣ ಮಾಡುವುದು ಹಾಗೂ ವಾಲ್ಮೀಕಿ ಪುತ್ಥಳಿಯನ್ನು ಪಟ್ಟಣದಲ್ಲಿ ನಿರ್ಮಿಸಲು ಜಾಗ ಗುರುತಿಸಿಕೊಡುವಂತೆ ತಾಲೂಕು ವಾಲ್ಮೀಕಿ ನಾಯಕ ಸಂಘದಿಂದ ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಆಸಂಧಿ ಕಲ್ಲೇಶ್, ಬೀರೂರು ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಮೋಹನ್, ಬಾಸೂರು ಚಂದ್ರಮೌಳಿ, ರಮೇಶ್, ಸಿ.ಎಸ್.ಪೂರ್ಣಿಮಾ, ಸಿ.ಆರ್.ಪ್ರವೀಣ್, ನಟರಾಜ್, ಎಸ್.ಎಸ್.ದೇವರಾಜ್, ಅಶೋಕ್, ತಿಮ್ಮಯ್ಯ, ಬಿ. ಚೋಪ್ದಾರ್, ಸಂತೋಷ್, ಕೆ.ಕೆ.ಮಂಜು, ಕೆ.ಡಿ.ನಾಗರಾಜ್, ನಾಗಮ್ಮ, ವಸಂತಮ್ಮ, ಸುರೇಶ್, ರಾಜು ಒಡೆಯರ್, ಪ್ರಸನ್ನ, ನಿತ್ಯಾನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net