ತಪ್ಪು ಒಪ್ಪಿದ ಸಿಎಂ ರಾಜೀನಾಮೆ ನೀಡಲಿ

N-Ravikumar-MLA-Twitter-620x391
Published on

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ದುಬಾರಿ ಹ್ಯೂಬ್ಲೋಟ್ ವಾಚ್ ಗಿಫ್ಟ್ ವಾಪಸ್ ಕೊಟ್ರು, ವಾಲ್ಮೀಕಿ ನಿಗಮ ಹಗರಣ ೧೮೭ ಕೋಟಿ ರೂ. ಅಲ್ಲ ೮೭ ಕೋಟಿ ರೂ. ಎಂದು ಒಪ್ಪಿದ್ದರು, ತಪ್ಪೆ ಮಾಡಿಲ್ಲವೆಂದವರು ೧೪ ನಿವೇಶನ ವಾಪಸ್ ನೀಡಿದರು. ಸರಣಿ ತಪ್ಪು ಒಪ್ಪಿಕೊಂಡವರು ಆತ್ಮಸಾಕ್ಷಿ ಇದ್ದರೆ ರಾಜೀನಾಮೆ ನೀಡಲಿ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಹೇಳಿದರು.
ಮಾತೆತ್ತಿದರೆ ಸಂವಿಧಾನ ಎನ್ನುವವರಿಗೆ ಗೌರವವಿದ್ದರೆ ನ್ಯಾಯಾಲಯಕ್ಕೆ ಅಪಮಾನ ಮಾಡಿ, ಆತ್ಮಸಾಕ್ಷಿ ಮಾತನಾಡುವುದು ಸರಿಯೇ? ತಪ್ಪು ಮಾಡಿದ್ದಕ್ಕೆ ನ್ಯಾಯಾಲಯ ತೀರ್ಪು ನೀಡಿದೆ. ಎಫ್‌ಐಆರ್ ಆಗಿದೆನಾ ಎಂದು ವಿಧಾನಸೌಧದೊಳಗೆ ಕೇಳುತ್ತಿದ್ದರು. ಎಫ್‌ಐಆರ್ ಆಗಿದೆ. ವಿಪರೀತ ತಪ್ಪು ಆಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಿಎಂಗೆ ಆತ್ಮಸಂವೇದನೆ, ಸಾಕ್ಷಾತ್ಕಾರ ಇದ್ದರೆ ೧೪ ನಿವೇಶನ ಏಕೆ ವಾಪಸ್ ಕೊಟ್ಟರು?. ಎರಡು ನ್ಯಾಯಾಲಯದ ಆದೇಶ ಬಂದಿದೆ. ರಾಜ್ಯದ ಎಲ್ಲ ಪ್ರವಾಸ ಮೊಟಕುಗೊಳಿಸಿದ್ದು, ಅಭಿವೃದ್ಧಿ ಕುಂಠಿತವಾಗಿದೆ. ಯಾವ ಮುಖ ಇಟ್ಟುಕೊಂಡು ಪ್ರವಾಸ ಮಾಡ್ಬೇಕಂತ ಎಲ್ಲ ಕೈಬಿಟ್ಟಿದ್ದಾರೆ. ನ್ಯಾಯಾಲಯ ಹೇಳಿದರೂ, ಆತ್ಮಸಾಕ್ಷಿ ಅಂತಾ ಒಪ್ಪುವುದಿಲ್ಲವಾ ಎಂದು ಪ್ರಶ್ನಿಸಿದರು.
ಹೈಕೋರ್ಟ್ಗೆ ಘೋರ ಅಪರಾಧ: ೧೪ ನಿವೇಶನ ವಾಪಸ್ ನೀಡಿದರು. ಸಿಎಂ ಪುತ್ರನೇ ಮೂಡಾ ಕಮೀಷನರ್‌ಗೆ ಪತ್ರ ತೆಗೆದುಕೊಂಡು ಹೋಗಿ ನೀಡಿದರು. ೨೪ ಗಂಟೆಯಲ್ಲೇ ಕಮೀಷನರ್ ಕ್ರಯಪತ್ರ ರದ್ದು ಮಾಡಿದರು. ಸರ್ಕಾರದ ಅತಿ ವೇಗದ ಕೆಲಸ ಇದು. ನ್ಯಾಯಾಲಯದಲ್ಲಿ, ತನಿಖಾ ಹಂತದಲ್ಲಿ ಇರುವ ವೇಳೆ ವೇಗದ ಕೆಲಸ ಮಾಡಿದ ಕಮೀಷನರ್‌ನನ್ನು ಅಮಾನತ್ತಿನಲ್ಲಿ ಇಡಬೇಕು. ಕೋರ್ಟ್ನಲ್ಲಿ ಚರ್ಚೆ, ಆದೇಶವಾದರೂ ಹೇಗೆ ತೀರ್ಮಾನಿಸಿದರು ಎಂದು ಪ್ರಶ್ನಿಸಿದರು.
ಸಾವರ್ಕರ್ ಗೋಮಾಂಸ ತಿನ್ನುತ್ತಿದ್ದರು ಎಂಬ ದಿನೇಶ ಗುಂಡುರಾವ ಹೇಳಿಕೆಗೆ ಪ್ರತಿಕ್ರಿಯಿಸಿ, ಹಸುಗಳನ್ನು ದೇವರಂತೆ ಪೂಜಿಸುವ ಸಂಸ್ಕೃತಿಯಿAದ ಬಂದವರು ಸಾವರ್ಕರ್. ಅವರನ್ನು ಜಗತ್ತಿನ ಕೋರ್ಟ್ ಬಂಧಿಸಿತ್ತು. ಅಪ್ರತಿಮ ಸಂಘಟನೆಗಾರರಾಗಿದ್ದರು. ದಿನೇಶ ಗುಂಡುರಾವ ಅವರಿಗೆ ಇಂತಹ ಮಾತುಗಳು ಶೋಭೆ ತರುವುದಿಲ್ಲ ಎಂದರು.
ಜಿಲ್ಲೆಯ ಸಮಸ್ಯೆ ಬಗ್ಗೆ ಮಾತಿಲ್ಲ: ಮೈಸೂರಿನ ಮೂಡಾ ಹಗರಣದ ಬಗ್ಗೆ ಮಾತನಾಡಿದ ಎನ್.ರವಿಕುಮಾರ ಅವರು ಕಲಬುರಗಿ ಜಿಲ್ಲೆಯಲ್ಲಿನ ಹೆಸರು ಖರೀದಿ, ರೈತರ ಆತ್ಮಹತ್ಯೆ, ಸಿದ್ಧಸಿರಿ ಕಾರ್ಖಾನೆ ಆರಂಭ ಸೇರಿ ಯಾವುದೇ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಿಲ್ಲ ಎಂದು ಹೇಳಿದರು.
ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ಶಶೀಲ ನಮೋಶಿ, ಎಂ.ಜಿ.ಮುಳೆ, ಪ್ರಮುಖರಾದ ಶಿವರಾಜ ಪಾಟೀಲ್ ರz್ದೆÃವಾಡಗಿ, ಸೋಮನಾಥ ಪಾಟೀಲ್, ಅಮರನಾಥ ಪಾಟೀಲ್, ಹರ್ಷಾನಂದ ಗುತ್ತೇದಾರ್, ಮಣಿಕಂಠ ರಾಠೋಡ, ಲಿಂಗರಾಜ ಬಿರಾದಾರ, ಅಶೋಕ ಬಗಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net