ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿ,ಎಂಎಲ್‌ಸಿ

CTD 28 MLC A.NARAYASWAMI--03
Published on


ಚಿತ್ರದುರ್ಗ: ಉಡುಪಿ ಕಾಲೇಜೊಂದರ ಶೌಚಗೃಹ ವಿಡಿಯೊ ಪ್ರಕರಣದ ತಪ್ಪಿತಸ್ಥ ಮೂವರು ವಿದ್ಯಾರ್ಥಿನಿಯರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಎಂಎಲ್‌ಸಿ ಎ.ನಾರಾಯಣ ಸ್ವಾಮಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅನೇಕ ದುರ್ಘಟನೆ ಗಳಾಗುತ್ತಿವೆ,ಸಮಾಜಘಾತಕ ಶಕ್ತಿಗಳಿಗೆ ಪ್ರೋತ್ಸಾಹ ಸಿಗುತ್ತಿದೆ. ಬೆಂಗಳೂರು ಹೆಬ್ಬಾಳ ಗಲಾಟೆಯ ಆರೋಪಿಗಳನ್ನು ಬಂಧಿಸಲು ಹೋ ದರೆ ಈಗಿರುವುದು ಕಾಂಗ್ರೆಸ್ ಸರ್ಕಾರವೆಂದು ಪೊಲೀಸರನ್ನು ಬೆದರಿಸಲಾಗಿದೆ.

ಡಿಜೆಹಳ್ಳಿ,ಕೆ.ಜಿ.ಹಳ್ಳಿ ಘಟನೆ ಪ್ರಕರಣದ ಮೊಕದ್ದಮೆ ಹಿಂ ಪಡೆಯುವಂತೆ ಶಾಸಕ ತನ್ವಿರ್‌ಸೇಠ್ ಒತ್ತಾಯಿಸಿದ್ದಾರೆಂದು ಅಸಮಾಧಾನ ವ್ಯಕ್ತ ಪಡಿಸಿದರು. ಪಠ್ಯಪುಸ್ತಕ ಪರೀಕ್ಷರಣೆ ರಾಜಕಾರಣಿಗಳ ಕೆ ಲಸವಲ್ಲ,ಸಿದ್ದರಾಮಯ ಅವರ ಸಂಪುಟ ಸದಸ್ಯರು ಶಿಕ್ಷಣ ತಜ್ಞರಲ್ಲವೆಂದು,ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಶಿಕ್ಷಣಸಚಿವ ಮಧುಬಂ ಗಾರಪ್ಪ ಅವರ ಹೇಳಿಕೆಯನ್ನು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net