ತಪ್ಪಿತಸ್ಥರ ರಕ್ಷಣೆ ಇಲ್ಲ :ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ

kota Srinivasa Pujari
Published on

ಮೈಸೂರು: ಮಹಿಳೆಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಸ್ಯಾಂಟ್ರೋ ರವಿ ಕುರಿತು ಸಮಗ್ರ ತನಿಖೆ ನಡೆಯಲಿದ್ದು, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಮುಖ್ಯಮಂತ್ರಿಯ ಮಗನ ಜತೆಗೆ ಸಂಪರ್ಕ, ಸಚಿವರ ಮಕ್ಕಳ ಜತೆಗೆ ಸಂಪರ್ಕವೆಲ್ಲ ಏನೇ ಇರಲಿ, ಎಲ್ಲವೂ ತನಿಖೆ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.

ನಮ್ಮ ಸರ್ಕಾರದಲ್ಲಿ ಯಾವತ್ತೂ ತಪ್ಪಿತಸ್ಥರ ರಕ್ಷಣೆ ಆಗುವುದಿಲ್ಲ. ಪ್ರತಿಪಕ್ಷಗಳು ಏನೇ ಆರೋಪ ಮಾಡಲಿ. ನಾವಂತೂ ನಿಷ್ಪಕ್ಷಪಾತ ತನಿಖೆ ಮಾಡಿಸುತ್ತೇವೆ ಎಂದರು.

ಎಸ್ಸಿ-ಎಸ್ಟಿಗಳ ಹೆಸರು ಹೇಳಿಕೊಂಡು ಕೆಲವರು ಉದ್ಧಾರವಾಗಿದ್ದಾರೆ. ಶೋಷಿತ ಪಂಗಡಗಳನ್ನು ವೋಟ್ ಬ್ಯಾಂಕ್ ಮಾಡಿಕೊಂಡು ಕೆಲವರು ಅಭಿವೃದ್ಧಿಯಾಗಿದ್ದಾರೆ. ಬಿಜೆಪಿ ಯಾವತ್ತೂ ವೋಟ್ ಬ್ಯಾಂಕ್‌ಗಾಗಿ ಕೆಲಸ ಮಾಡಿಲ್ಲ. ನಾವು ಶೋಷಿತರ ಪರ ಕೆಲಸ ಮಾಡಿದ್ದಕ್ಕೆ ಅವರು ನಮ್ಮ ಪರ ಇರುತ್ತಾರೆ. ಕಾಂಗ್ರೆಸ್ ಪಕ್ಷದ್ದು ಶೋಷಿತರ ಪರ ಬರೀ ಭಾಷಣ ಅಷ್ಟೇ. ಅದು ಈಗ ಆ ವರ್ಗದ ಜನರಿಗೆ ಅರ್ಥವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net