ತಪು$್ಪ ಹೆಚ್ಚಾಗಲು ಸ್ವಾರ್ಥವೇ ಕಾರಣ

14
Published on

ಪಾವಗಡ ರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮೀಜಿ ಹೇಳಿಕೆ

ತುಮಕೂರು:ವಿದ್ಯಾರ್ಥಿಗಳು ಮಾನವೀಯ ಗುಣ ಬೆಳಸಿಕೊಂಡು ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕಬೇಕು ಎಂದು ಪಾವಗಡ ರಾಮಕೃಷ್ಣ ಸೇವಾಶ್ರಮ ಅಧ್ಯಕ್ಷ ಶ್ರೀಜಪಾನಂದ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾನಿಲಯದ ಇಂರ್ಟನಲ್​ ಕ್ವಾಲಿಟಿ ಅಶುರೆನ್ಸ್​ ಸೆಲ್​ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ "ಲೈಪ್​ ಸ್ಕಿಲ್​ ಪ್ರೋಫೆಷನಲ್​ ಆ್ಯಂಡ್​ ಸೋಸಿಯಲ್​ ಎಥಿಕ್ಸ್​' ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಮಾನದ ಜನರಲ್ಲಿ ಮಾನವವೀಯ ಮೌಲ್ಯಗಳು ಕಡಿಮೆಯಾಗುತ್ತಿದೆ. ಇದರಿಂದ ಸಮಾಜದಲ್ಲಿ ಸ್ವಾಸ್ಥ ಹಾಳಾಗುತ್ತಿದೆ. ಹಾಗಾಗಿ, ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಹೃದಯವಂತರಾಗಬೇಕು. ಸ್ವಾಮಿ ವಿವೇಕಾನಂದರು ಹೇಳುತ್ತಾರೆ ಎಲ್ಲರಲ್ಲಿರುವ ಆತ್ಮವೂ ಕೂಡ ಪವಿತ್ರವಾದವು. ಆದರೆ ಸ್ವಾರ್ಥದಿಂದ ನಾವು ಹಲವಾರು ತಪು$್ಪಗಳನ್ನು ಮಾಡುತ್ತಿದ್ದೇವೆ. ಹಾಗಾಗಿ, ನಾವು ಉತ್ತಮ ಚಿಂತನೆಗಳನ್ನು ಮಾಡಿ ಅದರಂತೆ ನಡೆಯಬೇಕು. ಯುವಕರು ಯಾವಾಗಲೂ ಭಯ ಪಡದೆ ಧೈರ್ಯವಾಗಿರಬೇಕು ಎಂದು ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಫೂರ್ತಿ ತುಂಬುತ್ತಿದ್ದರು ಎಂದರು. ನಾವು ಒಂದು ಯೋಜನೆಯನ್ನು ಕೈಗೆತ್ತಿಕೊಂಡರೆ ಅದರ ಬಗ್ಗೆ ಕನಸು ಕಾಣಿ, ಆ ಯೋಜನೆಯ ಕುರಿತು ಯೋಚಿಸಿ, ಆ ಯೋಜನೆಯೊಂದಿಗೆ ಬದುಕಿ ಆಗ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹಲವಾರು ನಿದರ್ಶನಗಳನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.

ಸಾಹೇ ವಿಶ್ವವಿದ್ಯಾಲಯದ ಉಪಕುಲಾಧಿಪತಿ ಡಾ.ಕೆ.ಬಿ.ಲಿಂಗೇಗೌಡ ಮಾತನಾಡಿ, ಹಿರಿಯರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಉತ್ತಮವಾದ ಆದರ್ಶಗಳನ್ನು, ಉತ್ತಮ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಎಸ್​ಎಸ್​ಐಟಿ ಪ್ರಾಚಾರ್ಯ ಡಾ.ಎಂ.ಎಸ್​.ರವಿಪ್ರಕಾಶ್​, ಡೀನ್​ ಎಸ್​.ರೇಣುಕಲತಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net