ತನು-ಮನ-ಧನವನ್ನು ಸಮರ್ಪಿಸಬೇಕು

bkt-16-6
ನವನಗರದ ಚಂದ್ರದೇವಿ ಭೋವಿ-ವಡ್ಡರ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಚಂದ್ರಾದೇವಿ, ದುರ್ಗದೇವಿ, ವಿನಾಯಕ, ಹಾಗೂ ಮಾರುತಿ ದೇವಾಲಯಗಳ ಜಾತ್ರಾ ಮಹೋತ್ಸವದಲ್ಲಿ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು.
Published on

ಬಾಗಲಕೋಟೆ: ಶರಣರ ಸಾಮಾಜಿಕ ಸಿದ್ಧಾಂತಗಳಲ್ಲಿ ಕಾಯಕದಂತೆ ದಾಸೋಹವೂ ಒಂದು ಮಹತ್ವದ ಮೌಲ್ಯವಾಗಿದೆ. ಕಾಯಕ ಮತ್ತು ದಾಸೋಹ ಒಂದೇ ನಾಣ್ಯದ ಎರಡು ಮುಖಗಳಂತೆ ಒಂದಕ್ಕೊಂದು ಪೂರಕವಾಗಿವೆ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ನವನಗರದ ಚಂದ್ರದೇವಿ ಭೋವಿ-ವಡ್ಡರ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಚಂದ್ರಾದೇವಿ, ದುರ್ಗದೇವಿ, ವಿನಾಯಕ, ಹಾಗೂ ಮಾರುತಿ ದೇವಾಲಯಗಳ ಜಾತ್ರಾ ಮಹೋತ್ಸವದ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಕಾಯಕಕ್ಕೆ ಹೇಗೆ ನಿಯಮಗಳಿವೆಯೋ ದಾಸೋಹಕ್ಕೂ ನಿಯಮಗಳಿವೆ. ಮೋಸಮಾಡಿ, ಕಳವುಮಾಡಿ ತಂದ ಧನವನ್ನು ದಾಸೋಹಕ್ಕೆ ಸ್ವೀಕರಿಸುವುದಿಲ್ಲ. ಶ್ರಮಪಟ್ಟು ದುಡಿದು, ಸದಾಚಾರದಿಂದ ಗಳಿಸಿ, ಅಹಂಕಾರ ತೊರೆದು ಸಮರ್ಪಣಾ ಭಾವದಿಂದ ಅರ್ಪಿಸಿದಾಗ ಮಾತ್ರ ಅಂತಹ ಧನವು, ದಾಸೋಹಕ್ಕೆ ವಿನಿಯೋಗವಾಗುತ್ತದೆ ಎಂದರು.

ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಸಿದ್ಧರಾಮಪ್ಪ ಪಾತ್ರೋಟ, ರಾಮಚಂದ್ರ ಮುಧೋಳ, ರಂಗಪ್ಪ ಮುತ್ತಪ್ಪ ಪಾತ್ರೋಟ, ರಾಜು ಯ ಮಾಡಮಗೇರಿ, ಪ್ರಕಾಶ ಎಲ್ ವಡ್ಡರ, ಮಲ್ಲಿಕಾರ್ಜುನ ಕ ಪಾತ್ರೋಟ, ಪರಶುರಾಮ ಪಾತ್ರೋಟ, ಸದಾಶಿವ ಪಾತ್ರೋಟ, ನಾಗೇಶ ಪಾತ್ರೋಟ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net