ತನು ಮನ ಧನದಿಂದ ಮನಸ್ಸು ಬಂಗಾರ

28 hulsur 01
Published on

ಹುಲಸೂರು: ದೇವರ ಮೇಲೆ ನಂಬಿಕೆ ಇರಬೇಕು. ತನು, ಮನ, ಧನ ಗುರುಲಿಂಗ ಜಂಗಮರಿಗೆ ನೀಡಿದರೆ ಮನಸ್ಸು ಬಂಗಾರ ಆಗುತ್ತದೆ ಎಂದು ಗುರುಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.

ಪಟ್ಟಣದ ಗಾಂಧಿ ವೃತ್ತದಲ್ಲಿ ಗುರುವಾರ ಆಯೋಜಿಸಿದ್ದ ಕೈಲಾಸ ಪತಿ ಮಹಾದೇವ ಮಂದಿರದ ಕಳಸಾರೋಹಣ ಮತ್ತು ಶಿವಲಿಂಗ, ನಂದಿ ಮೂರ್ತಿ ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವದೆಲ್ಲೆಡೆ ದೇವರಿದ್ದಾರೆ. ಭಕ್ತಿಯಿಂದ ಸ್ಮರಿಸಿದವರಿಗೆ ಒಲಿಯುತ್ತಾನೆ. ಮಾಡುವ ಕಾಯಕದಲ್ಲಿ ದೇವರನ್ನು ಕಾಣಲು ಸಾಧ್ಯ ಎಂದರು.

ಜೀವನ ಮುಕ್ತಿಗೆ ಪ್ರವಚನ, ಭಜನೆ, ಕೀರ್ತನೆ, ಸತ್ಸಂಗದಲ್ಲಿ ಭಾಗವಹಿಸಬೇಕು. ಧರ್ಮದ ಕಾರ್ಯದಲ್ಲಿ ತೊಡಗಬೇಕು. ಮನುಷ್ಯ ಸಂಸಾರದ ಜಂಜಾಟದಲ್ಲಿ ಸಿಲುಕಿದ್ದಾನೆ. ಜಂಜಾಟದಿಂದ ಹೊರಕ್ಕೆ ಬರಬೇಕಾದರೆ ಸತ್ಸಂಗದಲ್ಲಿ ಭಾಗವಹಿಸಬೇಕು ಎಂದರು.

ಹಲಬರ್ಗಾ, ಶಿವಣಿ ಮಠದ ಶ್ರೀ ಹಾವಗಿಲಿಂಗ ಶಿವಾಚಾರ್ಯರು ಮಾತನಾಡಿ, ಕಳಸ ದೇವಾಲಯದ ಮೇಲೆ ಇದ್ದು, ಅದು ಎಲ್ಲವನ್ನು ಆಲಿಸಿ, ನಿತ್ಯ ಆಶೀರ್ವಾದ ಮಾಡುತ್ತದೆ. ಗ್ರಾಮದಲ್ಲಿ ಜಾತಿ ಮತ ಪಂಥ ಎನ್ನದೆ ಎಲ್ಲರೂ ಒಂದಾಗಿರಬೇಕು ಎಂದು ಹೇಳಿದರು.

ಸಾಯಿಗಾಂವದ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಪರತಾಪುರ ಗ್ರಾಪಂ ಅಧ್ಯಕ್ಷೆ ಶೋಭಾ ರಾಜಶೇಖರ, ಹುಲಸೂರು ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ ಬಾಲಕುಂದೆ, ಕಾಶೀನಾಥ ಪಾರಶೆಟ್ಟೆ, ದೇವಸ್ಥಾನ ಅಧ್ಯಕ್ಷೆ ಶಿವಲೀಲಾ ಮಠಪತಿ, ಮಾಳಪ್ಪ ವಗ್ಗೆ, ಜಗನ್ನಾಥ ಮೇಹಕರೆ, ಸೂರ್ಯಕಾಂತ ವಗ್ಗೆ, ರಾಜಕುಮಾರ ಚಾಕೋತೆ, ಬಾಬುರಾವ ಬಾಲಕುಂದೆ, ಶಿವಾಜಿರಾವ ಮುಸ್ತಾಪುರೆ, ವಿಶ್ವನಾಥ ಭಾಡಸಂಗೆ, ಚಂದ್ರಕಾAತ ನಂಜವಾಡೆ, ಸಾಯಿಬಣ್ಣ ಮೇತ್ರೆ, ರಾಜಪ್ಪ ಮಾಡದೆ, ಜೀತೇಂದ್ರ ಮೇಹಕರೆ, ರಾಮ ಅಗ್ರೆ, ಈರಮ್ಮ, ಜಗದೇವಿ ಸ್ವಾಮಿ ಇತರರಿದ್ದರು. ರಾಜಕುಮಾರ ಹೊನ್ನಾಡೆ ಸ್ವಾಗತಿಸಿ, ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net