ತನಿಖೆ ನಡೆದರೆ ಅಧಿಕಾರಿಗಳು ಜೈಲು ಪಾಲು

21. ಪಿ ವೈ ಪಿ.03
ಪಿರಿಯಾಪಟ್ಟಣದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಂಗವಾಗಿ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಕರಪತ್ರ ಬಿಡುಗಡೆ ಮಾಡಿದರು. ಎಂ.ಎಂ.ರಾಜೇಗೌಡ, ಎಚ್.ಸಿ.ಬಸವರಾಜು, ಜಿ.ಸಿ.ವಿಕ್ರಮ್ ರಾಜ್, ಆರ್.ಟಿ.ಸತೀಶ್, ಕೆ.ಎನ್. ಸೋಮಶೇಖರ್,ಲೋಕೇಶ್, ರವಿ ಇದ್ದರು.
Published on

ಪಿರಿಯಾಪಟ್ಟಣ: ಸರ್ಕಾರದ ಯೋಜನೆಗಳು ಪ್ರಾಮಾಣಿಕವಾಗಿ ಸಾರ್ವಜನಿಕರಿಗೆ ತಲುಪದೆ ಇದ್ದರೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದ ಬಾಗಿಲು ತಟ್ಟಲು ಹಿಂಜರಿಯುವುದಿಲ್ಲ ಎಂದು ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಎಚ್ಚರಿಕೆ ನೀಡಿದರು.

ಪಟ್ಟಣದ ಶ್ರೀಕಂಠಿ ಸುಬ್ಬಮ್ಮ ತಮ್ಮಯ್ಯ ಸಮುದಾಯ ಭವನದಲ್ಲಿ ಶನಿವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ವಿಜಯ ಸಂಕಲ್ಪ ಅಭಿಯಾನದ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಅಧಿಕಾರಿಗಳು ಮಾರ್ಪಡಿಸಿ ಅನುಷ್ಠಾನ ಮಾಡುತ್ತಿರುವುದರ ಬಗ್ಗೆ ದೂರುಗಳು ಬಂದಿವೆ. ನರೇಗಾ ಯೋಜನೆ ದುರುಪಯೋಗದ ಬಗ್ಗೆ ಹಲವು ಸಾಕ್ಷಾೃಧಾರ ದೊರೆತಿದ್ದು, ತನಿಖೆಗೆ ಆಗ್ರಹಿಸಲಾಗುವುದು. ಸಮರ್ಪಕವಾಗಿ ತನಿಖೆ ಕೈಗೊಂಡಲ್ಲಿ ಹಲವು ಅಧಿಕಾರಿಗಳು ಜೈಲು ಪಾಲಾಗಬಹುದು ಎಂದರು.

ಹೊಂದಾಣಿಕೆ ರಾಜಕಾರಣದಿಂದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ ಎಂಬುದು ಕೇಂದ್ರ ಸಚಿವ ಅಮಿತ್ ಷಾ ಅವರ ಗಮನಕ್ಕೆ ಬಂದಿದೆ. ಮುಂಬರುವ ಚುನಾವಣೆಗಳಲ್ಲಿ ಅನ್ಯ ಪಕ್ಷಗಳೊಂದಿಗೆ ಆಂತರಿಕ ಅಥವಾ ಬಹಿರಂಗವಾಗಿ ಹೊಂದಾಣಿಕೆ ಮಾಡಿಕೊಂಡರೆ ಶಿಸ್ತುಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದರು.

2023ರ ಏಪ್ರಿಲ್‌ನಿಂದ 2024ರ ಏಪ್ರಿಲ್‌ವರೆಗೆ ಚುನಾವಣಾ ಪರ್ವ ಕಾಲ. ವಿಧಾನಸಭೆ, ಜಿಪಂ, ತಾಪಂ, ಲೋಕಸಭೆ ಚುನಾವಣೆ ಗೆಲುವಿಗೆ ಸಂಘಟನೆ ಮಾಡಬೇಕಾಗಿದೆ ಎಂದರು.

ಮಾಜಿ ಶಾಸಕ ಎಚ್.ಸಿ.ಬಸವರಾಜು, ತಂಬಾಕು ಮಂಡಳಿಯ ಸದಸ್ಯ ಜಿ.ಸಿ.ವಿಕ್ರಮ್‌ರಾಜ್, ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿ ಸದಸ್ಯ ಆರ್.ಟಿ.ಸತೀಶ್, ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ.ರಾಜೇಗೌಡ ಮಾತನಾಡಿದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ರವಿ, ಮುಖಂಡರಾದ ಕೆ.ಎನ್.ಸೋಮಶೇಖರ್, ಅಣ್ಣಪ್ಪ, ಪಿ.ಜೆ.ರವಿ, ನಳಿನಿ, ಲೋಕೇಶ್, ಕಿರಣ್ ಜಯರಾಮ್‌ಗೌಡ, ಬೆಮ್ಮತ್ತಿ ಚಂದ್ರು, ವೀರಭದ್ರ, ಬೆಮ್ಮತ್ತಿ ಕೃಷ್ಣ, ಲೋಕಪಾಲಯ್ಯ, ಎಸ್.ಟಿ.ಕೃಷ್ಣಪ್ರಸಾದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net