ಬಳ್ಳಾರಿ : ಸಿಎಂ ಸಿದ್ದರಾಮಯ್ಯ ಮುಡಾ ಹಗರಣದ ತನಿಖೆ ಎದುರಿಸಿ, ಶುದ್ಧರಾಮಯ್ಯ ಆಗಲಿ ಎಂದು ಮಾಜಿ ಸಂಸದ ಮುನಿಸ್ವಾಮಿ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಹಿಂದೆ 14 ನಿವೇಶನಗಳನ್ನು ನಾನೇಕೆ ವಾಪಸ್ ನೀಡಬೇಕು ಎಂದಿದ್ದ ಸಿದ್ದರಾಮಯ್ಯ ಈಗ ನಿವೇಶನಗಳನ್ನು ಮರಳಿ ನೀಡಲು ಮುಂದಾಗಿದ್ದಾರೆ. ಸೈಟ್ ವಾಪಸ್ ಕೊಟ್ಟ ಕ್ಷಣ ಸಿದ್ದರಾಮಯ್ಯ ನಿರಾಪರಾಧಿ ಆಗಲ್ಲ. ಕೇವಲ 14 ಸೈಟ್ ಮಾತ್ರವಲ್ಲ, ಮುಡಾದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸುಮಾರು ಐದು ಸಾವಿರ ಕೋಟಿ ರೂ. ಹಗರಣವಾಗಿದ್ದು ಯಾರು ಯಾರಿಗೆ ನಿವೇಶನ ಹಂಚಿಕೆಯಾಗಿದೆ ಎಂಬುವುದನ್ನು ತನಿಖೆಗೆ ಒಳಪಡಿಸಬೇಕು ಎಂದರು. ಸಿದ್ದರಾಮಯ್ಯ ವಿಪಕ್ಷ ನಾಯಕರಾದ ವೇಳೆ ಬಿಎಸ್ ಯಡಿಯೂರಪ್ಪ ವಿರುದ್ಧ ಆರೋಪ ಕೇಳಿ ಬಂದ ವೇಳೆ ರಾಜೀನಾಮೆಗೆ ಆಗ್ರಹಿಸಿದರು. ಆದರೆ, ಈಗ ಆಡಳಿತಕ್ಕೆ ಬಂದ ಬಳಿಕ ಹೇಳಿಕೆ ಬದಲಾಯಿಸಿದ್ದಾರೆ. ಸಿಎಂ ಹುದ್ದೆಯಲ್ಲಿ ಸಿದ್ದರಾಮಯ್ಯ ಇರಲು ನಾಲಯಕರು ಎಂದು ವಾಗ್ದಳಿ ನಡೆಸಿದರು. ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಯೊಬ್ಬ ಶಾಸಕರು, ಸಚಿವರು ಭ್ರಷ್ಟಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಪೊಲೀಸರು ಸಹ ನೆಮ್ಮದಿಯಿಂದ ಇಲ್ಲ. ಮತಗೋಸ್ಕರ ಜಾತಿ ಜಾತಿಕಲಹ ವಿರುದ್ಧ ವಿರೋದ ಕಟ್ಟಿ, ದೇಶ ವಿರೋಧಿ ಸಂಘಟನೆಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ಇಂತಹವರಿಗೆ ಇಟಲಿಯ ಮೇಡಂ ಸೋನಿಯಾ ಗಾಂಧಿ, ಸಿದ್ದರಾಮಯ್ಯ ಅವರಿಗೆ ಕೃಪಕಟಾಕ್ಷವಿದೆ. ಗಣೇಶೋತ್ಸವ ಮಾಡಲು ಅನೇಕ ನಿಯಮಗಳನ್ನು ರೂಪಿಸಿದ ಕಾಂಗ್ರೆಸ್ ಸರ್ಕಾರ, ಟಿಪ್ಪು ಸುಲ್ತಾನ್ ಜಯಂತಿ, ಪ್ಯಾಲೆಸ್ಟೈನ್ ಧ್ವಜ ಹಾರಿಸಿಲು ಅನುಮತಿ ನೀಡಿದ್ದು ಯಾರು. ಇಂತಹವರಿಗೆ ಯಾವುದೇ ನಿಯಮ, ಕಟ್ಟುಪಾಡುಗಳಿಲ್ಲ. ರಾಜ್ಯದಲ್ಲಿ ಕೋಮು ಗಲಭೆ ನಡೆಯಲು ಎಂದು ಕಾಂಗ್ರೆಸ್ ಪಕ್ಷ ಕಾರಣವಾಗಿದೆ. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಭ್ರಮನಿರಸದಲ್ಲಿದ್ದಾರೆ. ಅವರು ಏನಿದ್ದರೂ ಪಕ್ಷದ ಚೌಕಟ್ಟಿನಲ್ಲಿ ಕುಳಿತು ಮಾತನಾಡಲಿ. ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದರೆ ತನಿಖೆಗೆ ಒಳಪಡಿಸಲಿ. ಎಸ್.ಟಿ.ಸೋಮಶೇಖರ್, ಯತ್ನಾಳ್ ಅವರ ಬಳಿ ಏನಾದರೂ ದಾಖಲೆಗಳಿದ್ದರೆ ಸಿದ್ದರಾಮಯ್ಯ ಅವರಿಗೆ ಕೊಟ್ಟು ತನಿಖೆಗೆ ತಿಳಿಸಲಿ. ಸೋಮಶೇಖರ್ ಅವರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.