

ಚಿತ್ರದುರ್ಗ: ಸಾಧು ಸಂತರು,ದಾರ್ಶನಿಕರ ಸಂಸ್ಮರಣೆ ಎಂದರೆ ಅವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಡೆಯುವುದಾಗಿದೆ ಎಂದು ನಿ ವೃತ್ತ ಪ್ರಾಂಶುಪಾಲ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಹೇಳಿದರು. ಚಿತ್ರದುರ್ಗ ತಾಲೂಕು ದೊಡ್ಡಸಿದ್ದವ್ವನಹಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಲಿಂಗೈಕ್ಯ ಶ್ರೀ ಬಸವಲಿಂಗ ಸ್ವಾಮೀಜಿ ಅವರ 64ನೇ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತತ್ವ,ನೀತಿಗಳಿಲ್ಲದ ಆಚರಣೆಗಳು,ನಡೆ-ನುಡಿ ಸಾಮ್ಯವಿಲ್ಲದ ಪ್ರವಚನಗಳಿಂದ ಸಾಮರಸ್ಯದ ಸಮಾಜವನ್ನು ಕಟ್ಟುವುದಕ್ಕೆ ಆಗುವುದಿಲ್ಲ. ಮಾತು ಗಳು ವೇದಿಕೆಗೆ ಸೀಮಿತವಾದಾಗ ಕೇಳುಗರು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ವೀರಶೈವ ಲಿಂಗಾಯಿತ ಸಮಾಜದ ಮುಖಂಡ ಕೆಇಬಿ ಷಣ್ಮುಖಪ್ಪ ಮಾತನಾಡಿ ನಡೆ-ನುಡಿಯಲ್ಲಿ ಇಬ್ಬಂದಿತನವಿರ ಬಾ ರದು. ಭಿನ್ನಾಭಿಪ್ರಾಯಗಳನ್ನು ಮೀರಿ ಸಮಾಜದ ಬೆಳವಣಿಗೆಗೆ ಶ್ರಮಿಸಬೇಕಿದೆ ಎಂದರು. ಶಿಕ್ಷಕ ನಾಗಭೂಷಣ್,ನಿವೃತ್ತ ಇಂಜಿನಿಯರ್ ಶಿವ ಕುಮಾರ್,ಜಾಗತಿಕ ಲಿಂಗಾಯಿತ ಮಹಾಸಭಾ ಜಿಲ್ಲಾ ಘಟಕದ ಕಾರ‌್ಯದರ್ಶಿ ಬಸವರಾಜಕಟ್ಟಿ ಇದ್ದರು. ನಾಗಲಾಂಬಿಕಾ ವಚನ ಹಾಡಿದರು. ಜಾ ಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾ ಸಂಚಾಲಕ ಧನಂಜಯ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ನಂದೀಶ್ ವಂದಿಸಿದರು. ಉಪನ್ಯಾಸಕಿ ರಶ್ಮಿ ನಿರೂಪಿಸಿದರು.