ತಣಿಗೆಬೈಲು ಚಿಣ್ಣರ ಪ್ರವಾಸ

ldh tour
ತಣಿಗೆಬೈಲು ಶ್ರೀ ಚೌಡೇಶ್ವರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದರು. ಅರಣ್ಯಾಧಿಕಾರಿ ಸುಧಾಕರ್, ಚಂದ್ರಪ್ಪ, ನಾಗರಾಜ ನಾಯ್ಕ, ಓಂಕಾರಯ್ಯ, ಪಾರ್ವತಮ್ಮ ಇತರರಿದ್ದರು.
Published on

ಲಿಂಗದಹಳ್ಳಿ: ಭದ್ರಾ ವನ್ಯಜೀವಿ ವಲಯ ಪ್ರಾರಂಭಗೊಂಡಂದಿನಿಂದಲೂ ಪ್ರತಿ ವರ್ಷ ಒಂದೊಂದು ಶಾಲೆ ವಿದ್ಯಾರ್ಥಿಗಳನ್ನು ಚಿಣ್ಣರ ವನದರ್ಶನ ಕಾರ್ಯಕ್ರಮದ ಮೂಲಕ ಜಿಲ್ಲೆಯ ಸಮಗ್ರ ಪರಿಚಯ ಮಾಡಿಕೊಡುವ ಪ್ರವಾಸ ಕಾರ್ಯಕ್ರಮಕ್ಕೆ ಕರೆದೊಯ್ಯಲಾಗುತ್ತಿದೆ. ಈ ಸಾಲಿನಲ್ಲಿ ತಣಿಗೆಬೈಲು ಶ್ರೀ ಚೌಡೇಶ್ವರಿ ಪ್ರೌಢಶಾಲೆ 40 ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ತಣಿಗೆಬೈಲು ಭದ್ರಾ ವನ್ಯಜೀವಿ ವಲಯ ಅರಣ್ಯಾಧಿಕಾರಿ ಸುಧಾಕರ್ ತಿಳಿಸಿದರು.

ಪ್ರವಾಸ ಸಮಯದಲ್ಲಿ ಕಡೂರಿನ ಸಸ್ಯಕ್ಷೇತ್ರ, ಚಿಕ್ಕಮಗಳೂರಿನ ಪವಿತ್ರ ವನ, ಕೆಮ್ಮಣ್ಣುಗುಂಡಿ ಗಿರಿಧಾಮ, ಅಯ್ಯನ ಕೆರೆ ವೀಕ್ಷಣೆ, ಅಮೃತಾಪುರ ದೇವಾಲಯ, ಮಲ್ಲೇನಹಳ್ಳಿ ಶ್ರೀ ದೇವಿರಮ್ಮ ದೇವಾಲಯ ಸೇರಿದಂತೆ ವಿವಿಧ ಪ್ರವಾಸಿ ಸ್ಥಳಗಳ ಪರಿಚಯ ಮಾಡಿಕೊಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ, ಪರಿಸರದ ಬಗ್ಗೆ ಪ್ರಬಂಧ ಸ್ಪರ್ಧೆ ಮುಂತಾದ ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಲಾಗವುದು ಎಂದು ಹೇಳಿದರು.

ತಣಿಗೆಬೈಲು ವಲಯದ ಉಪ ವಲಯಾರಣ್ಯಾಧಿಕಾರಿ ಚಂದ್ರಪ್ಪ ಮತ್ತು ಸಿಬ್ಬಂದಿ, ಶ್ರೀ ಚೌಡೇಶ್ವರಿ ಪ್ರೌಢಶಾಲಾ ಶಿಕ್ಷಕರಾದ ನಾಗರಾಜ ನಾಯ್ಕ, ಓಂಕಾರಯ್ಯ, ದೊಡ್ಡಮಲ್ಲಯ್ಯ, ಸಿದ್ದೇಶ್, ಪಾರ್ವತಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net