

ಕೆಂಭಾವಿ: ಸAಖ್ಯಾಬಲ ಇದ್ದರೂ ಅಧ್ಯಕ್ಷ ಗಾದಿಗೇರಲು ವಿಫಲವಾಗಿದ್ದ ಬಿಜೆಪಿ ಪಕ್ಷ ಕೊನೇ ಘಳಿಗೆಯಲ್ಲಿ ಚುನಾವಣೆಯ ರಣರಂಗಕ್ಕೆ ತಡೆಯಾಜ್ಞೆಯ ಬ್ರಹ್ಮಾಸ್ತç ಬಿಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹೊಡೆತ ನೀಡಿದೆ.
ಮಂಗಳವಾರ ನಡೆಯಬೇಕಿದ್ದ ಅಧ್ಯಕ್ಷ-ಉಪಧ್ಯಕ್ಷರ ಚುನಾವಣೆ ನ್ಯಾಯಾಲಯದ ತಡೆಯಾಜ್ಞೆ ನೀಡಿದ್ದರ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಕೆ.ವಿಜಯಕುಮಾರ ಅವರು ಮುಂದಿನ ಆದೇಶದವರೆಗೆ ಚುನಾವಣೆ ಮುಂದೂಡಿದರು. ೨೩ ಸದಸ್ಯ ಬಲದ ಪಟ್ಟಣದ ಪುರಸಭೆಯಲ್ಲಿ ೧೩ ಜನ ಬಿಜೆಪಿ ಪಕ್ಷದವರಿದ್ದು ಅಧ್ಯಕ್ಷ-ಉಪಾಧ್ಯಕ್ಷರ ಗಾದಿ ಸುಗಮ ಎಂದು ಭಾವಿಸಿದ್ದ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಕಳೆದ ಒಂದು ವಾರದ ಹಿಂದೆ ಭಾರಿ ಹೊಡೆತ ಕೊಟ್ಟು ಐವರು ಬಿಜೆಪಿ ಸದಸ್ಯರನ್ನು ತನ್ನತ್ತ ಸೆಳೆದು ಅಜ್ಞಾತ ಸ್ಥಳದಲ್ಲಿಟ್ಟಿತ್ತು. ಚುನಾವಣೆಯ ದಿನ ಸಮೀಪಿಸುತ್ತಿದ್ದಂತೆ ದಿನಕ್ಕೊಂದು ಅಚ್ಚರಿಯ ಬೆಳವಣಿಗೆ, ಎರಡೂ ಪಕ್ಷಗಳಲ್ಲಿ ಗುಸು ಮಾತುಗಳು ಪಟ್ಟಣದೆಲ್ಲೆಡೆ ಕೇಳಿ ಬರುತ್ತಿದ್ದವು.
ತಮ್ಮ ಪಕ್ಷದ ಸದಸ್ಯರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ಅಸಮಧಾನಗೊಂಡಿದ್ದ ಬಿಜೆಪಿ ಸದಸ್ಯರು ಪಕ್ಷದ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಪಾಟೀಲ್ ಯಾಳಗಿ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಕೈ ಕೊಟ್ಟು ಪಲಾಯನಗೈದ ಸದಸ್ಯರ ಮನೆ ಮನೆಗೆ ತೆರಳಿ ಪಕ್ಷದ ವಿಪ್ ಅಂಟಿಸಿ ಬಂದಿದ್ದರು. ೧೩ ಸದಸ್ಯರ ಸ್ಪಷ್ಟ ಬಹುಮತವಿದ್ದರೂ ಸಿಂಹಾಸನ ಏರಲು ಬಿಜೆಪಿ ತನ್ನ ಪ್ರಯತ್ನ ಮಾಡಿತ್ತು. ಆದರೆ ಕಾಂಗ್ರೆಸ್ ಹೆಣೆದಿದ್ದ ಜೇಡರ ಬಲೆಯಲ್ಲಿ ಇವು ನಾಟದೆ ಇದ್ದಾಗ ಕೊನೆಗೆ ನ್ಯಾಯಾಲಯದ ಮೊರೆ ಹೋಗಿ ಪಕ್ಷದ ಓರ್ವ ಮಹಿಳಾ ಸದಸ್ಯರ ಮೂಲಕ ಚುನಾವಣೆಗೆ ತಡೆಯಾಜ್ಞೆ ತಂದಿದ್ದು, ಇದರಿಂದ ಅಧಿಕಾರ ಅನುಭವಿಸಲು ತುದಿಗಾಲಲ್ಲಿ ನಿಂತಿದ್ದ ಕಾಂಗ್ರೆಸ್‌ಗೆ ಭಾರಿ ಪೆಟ್ಟು ಕೊಟ್ಟಂತಾಗಿದೆ. ಬುಧವಾರ ಈ ಕುರಿತು ಮತ್ತೆ ನ್ಯಾಯಾಲಯದಲ್ಲಿ ವಿಚಾರಣೆಯಿದ್ದು, ಅಲ್ಲಿಯವರೆಗೆ ಕಾದು ನೋಡುವ ತಂತ್ರ ಈ ಎರಡೂ ಪಕ್ಷಗಳು ಮಾಡುತ್ತಿವೆ.