ಚಾಮರಾಜನಗರ: ಜಿಲ್ಲೆಯಲ್ಲಿ ತೆರೆದ ಕೊಳವೆಬಾವಿ, ಕೃಷಿಹೊಂಡ, ಕೆರೆ-ಕಟ್ಟೆ, ಕಾಲುವೆ ಮುಂತಾದ ಜಲಮೂಲಗಳ ಸುತ್ತಾ ಅವಘಡಗಳನ್ನು ತಡೆಯುವ ಸಲುವಾಗಿ ಮುಳ್ಳುತಂತಿ, ತಡೆಗೋಡೆ ನಿರ್ಮಿಸಿ, ಎಚ್ಚರಿಕೆಯ ಫಲಕಗಳನ್ನು ಹಾಕುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಸೂಚಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಮಕ್ಕಳು ತೆರೆದ ಕೊಳವೆಬಾವಿ, ಕೃಷಿಹೊಂಡ, ಕೆರೆ-ಕಟ್ಟೆ, ಕಾಲುವೆ ಮುಂತಾದ ಜಲಮೂಲಗಳಲ್ಲಿ ಬಿದ್ದು ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇಂತಹ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಕೆರೆ-ಕಟ್ಟೆ, ಮ್ಯಾನ್‌ಹೋಲ್, ಕೃಷಿಹೊಂಡ, ಕೊಳವೆಬಾವಿಗಳು, ಕಲ್ಯಾಣಿಗಳು, ಕೊಳಚೆ ಚರಂಡಿಗಳು, ನದಿ-ಜಲಪಾತಗಳ ತೀರ, ನೀರಿನ ಸಂಪ್, ಕಲ್ಲುಕೋರೆ, ಈಜುಕೊಳ ಮುಂತಾದ ಕಡೆಗಳಲ್ಲಿ ಮುಳ್ಳುತಂತಿ, ತಡೆಗೋಡೆ ನಿರ್ಮಿಸಿ, ಎಚ್ಚರಿಕೆಯ ಫಲಕಗಳನ್ನು ಹಾಕುವುದರ ಮೂಲಕ ಮುಂಜಾಗ್ರತಾ ಕ್ರಮವಹಿಸಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.