

ನವಲಗುಂದ: ಮಹದಾಯಿ, ಕಳಸಾ-ಬಂಡೂರಿ ಯೋಜನೆ ಹಾಗೂ ರೈತರ ಪ್ರಮುಖ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿನ ಪಕ್ಕದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಕಳಸಾ- ಬಂಡೂರಿ ಹೋರಾಟ ಒಕ್ಕೂಟ ಹಾಗೂ ವಿವಿಧ ಸಂಘಟನೆ ಆಶ್ರಯದಲ್ಲಿ ಶುಕ್ರವಾರ ಎರಡನೇ ದಿನದ ಉಪವಾಸ ಸತ್ಯಾಗ್ರಹ ಮುಂದುವರಿಯಿತು.
ಕೇಂದ್ರ ಒಕ್ಕೂಟ ಸಮತಿ ಅಧ್ಯಕ್ಷ ಲೋಕನಾಥ ಹೆಬಸೂರ ಮಾತನಾಡಿ, ಮಹದಾಯಿ ನ್ಯಾಯಾಧೀಕರಣದ ಆದೇಶದ ಪ್ರಕಾರ ರಾಜ್ಯ ಸರ್ಕಾರ ಕಾಮಗಾರಿ ಆರಂಭಿಸಿಲ್ಲ. ಕಳಸಾ ನಾಲೆಗೆ ಕಟ್ಟಿರುವ ತಡೆಗೋಡೆ ತೆಗೆದು ಮಲಪ್ರಭೆಗೆ ನೀರು ಹರಿಸಬೇಕು ಎಂದರು.
ಪಿ.ಎನ್. ಬಿಳಗಿ, ಮರಿತಿಮ್ಮಪ್ಪ ಹಳ್ಳದ, ಯಲ್ಲಪ್ಪ ದಾಲಿನ, ಶಿವಾನಂದ ಚಿಕ್ಕನರಗುಂದ, ಶಂಕ್ರಪ್ಪ ಚಲವಾದಿ, ಸಿದ್ದಪ್ಪ ಖಂಡಿಬಾಗಿಲ, ಮಲ್ಲಪ್ಪ ನಾಯ್ಕರ, ಈರನಗೌಡ ಮುದಿಗೌಡರ, ಮಾಹಾಂತೇಶ ಮೂಲಿಮನಿ, ಚನ್ನಪ್ಪ ನಾಗರಹಳ್ಳಿ, ಈರಣ್ಣ ನಿಡವಣಿ ಇತರರು ಇದ್ದರು.