ತಜ್ಞರ ತಂಡದಿಂದ ಪರಿಶೀಲನೆ : ಸುಂಟಿಕೊಪ್ಪದಲ್ಲಿ ಡೆಂೆ ಜ್ವರ ಆತಂಕ ಹಿನ್ನೆಲೆ

22sunti01
Published on

ಸುಂಟಿಕೊಪ್ಪ: ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಸುಂಟಿಕೊಪ್ಪ ವ್ಯಾಪ್ತಿಯಲ್ಲಿನ ಸೊಳ್ಳೆಗಳನ್ನು ಪರೀಕ್ಷಾರ್ಥವಾಗಿ ಹಿಡಿದು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.


ಹಾಸನ ಮತ್ತು ಮೈಸೂರಿನಿಂದ ಆಗಮಿಸಿದ್ದ ಕೀಟಾಣು ಶಾಸ್ತ್ರಜ್ಞರ ತಂಡ ಡಾ.ರಾಜೇಶ್ ಕುಲಕರ್ಣಿ ನೇತೃತ್ವದಲ್ಲಿ ಆಗಮಿಸಿದ್ದು, ಸುಂಟಿಕೊಪ್ಪದ 1ನೇ ವಿಭಾಗ , 2ನೇ ವಿಭಾಗದ ಅಪ್ಪಾರಂಡ ಬಡಾವಣೆ ಮತ್ತಿತರ ಭಾಗಗಳಲ್ಲಿ ಮುಂದಿನ 4 ರಿಂದ 5 ದಿನ ಸೊಳ್ಳೆಗಳನ್ನು ಹಿಡಿದು ಪ್ರಯೋಗಾಲಯಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯಲಿದೆ. ಆ ಮೂಲಕ ಯಾವ ರೀತಿಯ ಸೊಳ್ಳೆ ಮತ್ತು ಇದು ಹರಡುವ ಕಾಯಿಲೆ ಯಾವುದು, ಈ ಸೊಳ್ಳೆ ಕಡಿತದಿಂದಲೇ ಡೆಂೆ ಜ್ವರ ಬಾಧಿಸುತ್ತಿರುವುದು ನಿಜವೇ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಲಿದೆ.


ಈ ನಿಟ್ಟಿನಲ್ಲಿ ಸುಂಟಿಕೊಪ್ಪ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿದಿನ ಭೇಟಿ ನೀಡುತ್ತಿದ್ದು, ರೋಗಿಗಳ ವಿವರ ಪಡೆದು ಸೂಕ್ತ ಚಿಕಿತ್ಸೆ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಮನೆ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸುವ ಜವಾಬ್ದಾರಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net