

ಕರಜಗಿ: ಅಫಜಲಪುರ ತಾಲೂಕಿನಿಂದ 30ಕಿಮೀ ಸಮೀಪದ ಉಡಚಾಣ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿದೆ ಹಾಗೂ 7 ಕಿಮೀ ಡಾಂಬರ್ ರಸ್ತೆ ಸಂಪೂರ್ಣ ಹಾಳಾಗಿ ತಗ್ಗು ಗುಂಡಿಗಳ ಮಧ್ಯೆ ಸಂಚಾರಕ್ಕೆ ಕಷ್ಟಕರವಾಗಿದೆ,
ಕರಜಗಿ ವ್ಯಾಪ್ತಿಯಲ್ಲಿ ಬರುವ ಉಡಚಾಣ ಗ್ರಾಮ ಮಾರ್ಗದಲ್ಲಿ ತುಂಬಾ ವರ್ಷಗಳ ಹಿಂದೆ ಡಾಂಬರ್ ರಸ್ತೆ ನಿಮರ್ಿಸಲಾಗಿದ್ದು, ಈಗ ರಸ್ತೆ ಕೆಟ್ಟು ಹೋಗಿ ಡಾಂಬರ್ ಕಿತ್ತು ಗುಂಡಿಗಳು ಆವರಿಸಿವೆ. ಸ್ವಲ್ಪ ಮಳೆಯಾದರೆ ಸಾಕು ದ್ವಿಚಕ್ರ ವಾಹನಗಳ ಸವಾರರು ಪಾಡು ದೇವರೇ ಬಲ್ಲ ಎಂಬಂತಾಗಿದೆ.
ಅನೇಕ ವಾಹನ ಸವಾರರು ಬಿದ್ದ ಉದಾಹರಣೆಗಳಿವೆ. ಇದರಿಂದ ಗ್ರಾಮಸ್ಥರು ಸಕರ್ಾರ ಹಾಗೂ ಜನಪ್ರತಿನಿಧಿಗಳ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ. ಗ್ರಾಮಕ್ಕೆ ಬಸ್ ಸೌಕರ್ಯವಿದ್ದರೂ ತಗ್ಗು ಗುಂಡಿಗಳಿಂದ ಗ್ರಾಮಕ್ಕೆ ಸರಿಯಾಗಿ ಬರುತ್ತಿಲ್ಲ. ಇದರಿಂದ ಜನತೆ ಟೆಂಪೋ, ಟಂಟಂ ಸೇರಿ ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ.
ಈ ಕುರಿತು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.