ಬಳ್ಳಾರಿ : ಇಲ್ಲಿನ ಹಳೆಯ ಬೈಪಾಸ್ ರಸ್ತೆಯಲ್ಲಿ ಮೊಹರಂ ಹಬ್ಬದ ದೇವರ ಮೆರವಣಿಗೆ ವೇಳೆ ತಗಡಿನ ಶೆಡ್ ಕುಸಿದಿದೆ. ದೇವರು ಮೆರವಣಿಗೆ ಹೋಗುವ ರಸ್ತೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಆದ್ದರಿಂದ, ಕೆಲವರು ತಗಡಿನ ಶೆಡ್ ಮೇಲೆ ಕುಳಿತು ವೀಕ್ಷಿಸುತ್ತಿದ್ದರು. ಜನರ ಭಾರದಿಂದ ಏಕಾಏಕಿ ಶೆಡ್ ಕುಸಿದಿದೆ, ಅದೃಷ್ಟವಶ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಗರದ ಕೌಲಬಜಾರ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.